ದೇಶದ್ರೋಹಿಗೆ ಕಠಿಣ ಶಿಕ್ಷೆ ವಿಧಿಸಿ

GLD NEWS 21-1
Published on

ಗುಳೇದಗುಡ್ಡ: ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ದೇಶದ್ರೋಹಿ ಅಮೂಲ್ಯಳ ಮೇಲೆ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಹಿಂದುಪರ ಸಂಘಟನೆ ಮುಖಂಡ ಭುವನೇಶ ಪೂಜಾರಿ ಹೇಳಿದರು.

ಇಲ್ಲಿನ ಪುರಸಭೆ ಎದುರು ಹಿಂದುಪರ ಸಂಘಟನೆಗಳು ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ದೇಶದ್ರೋಹಿಗಳು ಎಲ್ಲಲ್ಲಿ ಅಡಗಿದ್ದಾರೋ ಅವರನ್ನು ಹುಡುಕಿ ಶಿಕ್ಷೆ ನೀಡಬೇಕು. ದೇಶ ವಿರೋಧಿ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕಾನೂನು ರೂಪಿಸಬೇಕು ಎಂದರು.

ರವಿ ಶೇಬಿನಕಟ್ಟಿ, ಶಂಕರ ಕಾಟವಾ, ಮುತ್ತು ಚಿಕ್ಕನರಗುಂದ, ರಾಜು ಗೌಡರ, ಸಚಿನ್ ಭಜಂತ್ರಿ, ಮಣಿಕಂಠ ಎಣ್ಣಿ, ಶಿವು ತುಪ್ಪದ, ಉದಯ ಕಂಠಿ, ಸಾಗರ ಸಂಗಾ, ಮಹೇಶ ಸೂಳಿಭಾವಿ, ಮಂಜು ನೇಮದಿ, ಸಾಗರ ಹರ್ತಿ, ಶೀತಲ ಸತ್ತಿಗೇರಿ, ಪರಶುರಾಮ ಧನ್ನೂರ, ರಾಜು ಚಿಕ್ಕನರಗುಂದ, ವಿಜಯ ಕವಿಶೆಟ್ಟಿ ಮತ್ತಿತರರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net