ಗಾಂಧೀಜಿ ಸಂದೇಶ ಪಾಲಿಸಿ

GLD-2-3
Published on

ಗುಳೇದಗುಡ್ಡ: ಮಹಾತ್ಮ ಗಾಂಧೀಜಿ ಅವರು ಸತ್ಯ, ಅಹಿಂಸೆಯೇ ಪರಮಧರ್ಮ ಎಂದು ಪ್ರತಿಪಾದಿಸಿ ಆ ಮೂಲಕವೇ ಬ್ರಿಟಿಷರ ದಾಸ್ಯದಿಂದ ದೇಶವನ್ನು ಮುಕ್ತಗೊಳಿಸಿದರು ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತ ಮಾವಿನಮರದ ಹೇಳಿದರು.

ಸ್ಥಳೀಯ ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗಾಂಧೀಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ಬಾಪೂಜಿ ಅವರ ಸಂದೇಶಗಳನ್ನು ಪಾಲಿಸಿದರೆ ಶಾಂತಿ ನೆಮ್ಮದಿಯಿಂದ ಜೀವಿಸಬಹುದು ಎಂದರು.
ಸಂತೋಷ ನಾಯನೇಗಲಿ, ಸಚಿನ್ ನಾಯನೇಗಲಿ, ರಾಘವೇಂದ್ರ ಗೋವಿನಕೊಪ್ಪ, ಸಿದ್ದಪ್ಪ ಸುಣಗದ, ಶಿವಪ್ಪ ಕುಂಬಾರ, ಹನುಮಂತ ಕೊಣ್ಣೂರ, ವೀರಯ್ಯ ಹೊಸಮಠ, ಮಲ್ಲಪ್ಪ ಕೊಣ್ಣೂರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net