ಮನೆಗೆ ನುಗ್ಗಿದ ಒಳಚರಂಡಿ ನೀರು

GLD 11-1
Published on

ಗುಳೇದಗುಡ್ಡ: ಒಳಚರಂಡಿ ಪೈಪ್‌ಲೈನ್ ಬ್ಲಾಕ್ ಆಗಿದ್ದರಿಂದ ನಗರದ ಹೊಸಪೇಟೆ ಓಣಿಯ ಕೆಲವು ಮನೆಗಳ ವಠಾರದಲ್ಲ್ಲಿ ಒಳಚರಂಡಿ ನೀರು ನುಗ್ಗಿ ಮೊಳಕಾಲುಮಟ್ಟಕ್ಕೆ ನಿಂತಿದ್ದು ದುರ್ವಾಸನೆ ಬೀರುತ್ತಿದೆ.

ರಸ್ತೆಯಲ್ಲಿನ ಮ್ಯಾನ್‌ಹೋಲ್‌ಗಳ ಸರಿಯಾದ ನಿರ್ವಹಣೆಯಿಲ್ಲದ ಕಾರಣ ಮಳೆ ಆದಾಗೊಮ್ಮೆ ಇಲ್ಲಿನ ನಾಲ್ಕೈದು ಮನೆಗಳಲ್ಲಿ ಒಳಚರಂಡಿ ನೀರು ನುಗ್ಗುತ್ತದೆ. ವಠಾರದಲ್ಲಿ ನಿಂತಿರುವ ಒಳಚರಂಡಿ ನೀರನ್ನು ಮೋಟರ್‌ನಿಂದ ಹೊರಹಾಕುವಂತಾಗಿದೆ. ಕೆಲವು ಮನೆಯವರು ಅಸಹಾಯಕ ಸ್ಥಿತಿಯಲ್ಲಿದ್ದು ಕೊಳಚೆ ನೀರು ಹೊರಹಾಕಲಾಗದೆ ಅದರಲ್ಲೇ ಇರಬೇಕಾದ ಅನಿವಾರ್ಯತೆ ಉಂಟಾಗಿದೆ. ಸೊಳ್ಳೆಗಳು ಹೆಚ್ಚಿದ್ದು ಮಕ್ಕಳು, ವೃದ್ಧರು ಕಾಯಿಲೆಗೆ ಬೀಳುವಂತಾಗಿದೆ. ಕೂಡಲೇ ಪುರಸಭೆ ಅಧಿಕಾರಿಗಳು ಒಳಚರಂಡಿ ದುರಸ್ತಿ ಮಾಡಿಸಿ ಈ ನರಕದಿಂದ ನಮ್ಮನ್ನು ಪಾರು ಮಾಡಬೇಕು ಎಂದು ನಿವಾಸಿಗಳಾದ ಮಲ್ಲಿಕಾರ್ಜುನ ರಾಜನಾಳ, ಮಹಾಂತೇಶ ಲಕ್ಕುಂಡಿ, ಈರಪ್ಪ ಬಂಕಾಪುರ, ಶಕುಂತಲಾ ಉಂಕಿ, ತಿಪ್ಪಣ್ಣ ದಂಡಾವತಿ, ಅಯ್ಯಪ್ಪ ವಾಳದುಂಕಿ, ನೀಲಪ್ಪ ಉಂಕಿ, ನೀಲಪ್ಪ ಹುಣಸಿಮರದ, ಗೌರಮ್ಮ ಉಂಕಿ, ಶೇಖರಪ್ಪ ಬಂಕಾಪುರ, ಗಂಗವ್ವ ಕುಚಬಾಳ ಮತ್ತಿತರರು ಒತ್ತಾಯಿಸಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net