ಮಾತೆ ಮಹಾದೇವಿ ಜನ ಮನಗಳಿಗೆ ಶರಣ ಸಾಹಿತ್ಯ ಬಿತ್ತರಿಸಿದರು: ಬಸವರಾಜ ಹೂಗಾರ

15 Ylb 01
ಯಲಬುರ್ಗಾ ತಾಲೂಕಿನ ಗುಳೆದಲ್ಲಿ ಹಮ್ಮಿಕೊಂಡಿದ್ದ ಬಸವಧರ್ಮ ಪೀಠದ ಮೊದಲ ಮಹಿಳಾ ಜಗದ್ಗುರು ಮಾತೆ ಮಹಾದೇವಿಯವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಬಸವದಳದ ಅಧ್ಯಕ್ಷ ರೇಣುಕಪ್ಪ ಮಂತ್ರಿ, ಕಾರ್ಯದರ್ಶಿ ಬಸವರಾಜ ಹೂಗಾರ, ಬಸಣ್ಣ ಹೊಸಳ್ಳಿ, ಪಂಪಣ್ಣ ಇಒ ಹೊಸಳ್ಳಿ, ಪಕೀರಪ್ಪ ಮಂತ್ರಿ, ಶಿವಪುತ್ರಪ್ಪ ಉಚ್ಚಲಕುಂಟಿ, ಹನುಮೇಶ ಇದ್ದರು.
Published on

ಯಲಬುರ್ಗಾ: ಬಸವಣ್ಣ ಕೊಟ್ಟಂತಹ ಮಹಿಳಾ ಸ್ವಾತಂತ್ರ್ಯದ ಫಲವಾಗಿ ಜಗತ್ತಿನ ಯಾವ ಧರ್ಮದಲ್ಲೂ ಮಹಿಳೆಯರಿಗೆ ಸಿಗದ ಧರ್ಮ ಗುರುವಿನ ಪಟ್ಟ ಲಿಂಗಾಯತ ಧರ್ಮದಲ್ಲಿ ಸಿಕ್ಕಿದೆ ಎಂದು ಬಸವದಳದ ಕಾರ್ಯದರ್ಶಿ ಬಸವರಾಜ ಹೂಗಾರ ಹೇಳಿದರು.


ತಾಲೂಕಿನ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವದಳ ಮಂಗಳವಾರ ಹಮ್ಮಿಕೊಂಡಿದ್ದ ಬಸವಧರ್ಮ ಪೀಠದ ಮೊದಲ ಮಹಿಳಾ ಜಗದ್ಗುರು ಮಾತೆ ಮಹಾದೇವಿಯವರ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಮೊಟ್ಟ ಮೊದಲು ಖಾವಿ ಧರಿಸಿ ಬಸವಧರ್ಮ ಪೀಠವನ್ನೇರಿದ ಪ್ರಥಮ ಮಹಿಳೆ ಮಾತೆ ಮಹಾದೇವಿಯವರು. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ 12ನೇ ಶತಮಾನದಲ್ಲಿ ಬಸವಾದಿ ಶರಣರಿಂದ ರಚಿತವಾದ ವಚನ ಸಾಹಿತ್ಯ ಹೊತ್ತುಕೊಂಡು, ಸಾಹಿತ್ಯದ ತಿರುಳನ್ನು ದೇಶ ವಿದೇಶದ ಜನ ಮನಗಳಿಗೆ ಬಿತ್ತರಿಸುವಲ್ಲಿ ತಮ್ಮ ಜೀವನ ಸವೆಸಿದ್ದಾರೆ.
ಅರವತ್ತರ ದಶಕದಿಂದಲೇ ಬಸವಧರ್ಮ ತತ್ವಗಳ ಬಗ್ಗೆ ಅಪರಿಮಿತ ಆಸಕ್ತಿ ಬೆಳೆಸಿಕೊಂಡಿದ್ದ ಮಾತೆ ಮಹಾದೇವಿ ಜಂಗಮ ದೀಕ್ಷೆ ಪಡೆದ ಬಳಿಕ ಸಾಕಷ್ಟು ಧರ್ಮಸೇವೆಗಳನ್ನು ಮಾಡಿದ್ದಾರೆ ಎಂದರು. ಬಸವದಳದ ಅಧ್ಯಕ್ಷ ರೇಣುಕಪ್ಪ ಮಂತ್ರಿ ಅಧ್ಯಕ್ಷತೆ ವಹಿಸಿದ್ದರು.


ಪ್ರಮುಖರಾದ ಲಿಂಗನಗೌಡ ದಳಪತಿ, ಸೋಮಣ್ಣ ಮಂತ್ರಿ, ಜಗದೀಶಪ್ಪ ಮೇಟಿ, ಮಲ್ಲಿಕಾರ್ಜುನ ಮಂತ್ರಿ, ಬಸವರಾಜ ಕೋಳೂರು, ಬಸವರಾಜ ಹೊಸಳ್ಳಿ, ರಾಷ್ಟ್ರಪತಿ ಹೊಸಳ್ಳಿ, ದೇವೇಂದ್ರಪ್ಪ ಆವಾರಿ, ನಿಂಗಪ್ಪ ಮಂತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net