ಗುಲ್ಬರ್ಗ ವಿವಿ ಪ್ರಭಾರಿ ಕುಲಸಚಿವರಾಗಿ ನೇಮಕ

Oplus_0
Oplus_0
Published on

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ತಾತ್ಕಾಲಿಕ ಕುಲಸಚಿವರಾಗಿ ವಾಣಿಜ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಹಾಗೂ ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿ ವಿಭಾಗದ ನಿರ್ದೇಶಕ ಪ್ರೊ.ರಾಜನಾಳಕರ್ ಲಕ್ಷ್ಮಣ ನೇಮಕಗೊಂಡಿದ್ದಾರೆ. ಕುಲಸಚಿವರಾಗಿದ್ದ ಹಿರಿಯ ಶ್ರೇಣಿ ಕೆಎಎಸ್ ಅಧಿಕಾರಿ ಸೋಮಲಿಂಗ ಗೋಪಾಲ ಗೆಣ್ಣೂರು ಅವರನ್ನು ರಾಜ್ಯ ಸರ್ಕಾರ ವಿಜಯಪುರ ಜಿಲ್ಲಾ ಅಪರ ಜಿಲ್ಲಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಿದ್ದು, ತೆರವಾದ ಸ್ಥಾನಕ್ಕೆ ಪ್ರೊ.ರಾಜನಾಳಕರ್ ಲಕ್ಷ್ಮಣ ಅವರನ್ನು ತಾತ್ಕಾಲಿಕವಾಗಿ ನೇಮಿಸಿ ಕುಲಪತಿ ಪ್ರೊ.ದಯಾನಂದ ಅಗಸರ್ ಆದೇಶಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net