ಗೌಳಿಗರ ಪ್ರಾಣಿ ಪ್ರೀತಿ ಅನುಕರಣೀಯ - ಧನಂಜಯ ಜಾಧವ್

1010
Published on

ಬೆಳಗಾವಿ: ಇಲ್ಲಿನ ಕುವೆಂಪು ನಗರದಲ್ಲಿ ಭಾನುವಾರ ಸ್ವಯಂಭು ಗೌಳಿ ಸಮಾಜದಿಂದ ಪ್ರತಿವರ್ಷದಂತೆ ಈ ಬಾರಿಯೂ ಎಮ್ಮೆಗಳ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಗೌಳಿಗರ ನೂರಾರು ಎಮ್ಮೆಗಳು ಪಾಲ್ಗೊಂಡಿದ್ದವು.

ಸ್ಪರ್ಧೆಗೆ ಚಾಲನೆ ನೀಡಿದ ಬೆಳಗಾವಿ ತಾಲೂಕು ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಧನಂಜಯ ಜಾಧವ್ ಮಾತನಾಡಿ, ಎಮ್ಮೆಗಳ ಓಟದ ಸ್ಪರ್ಧೆಯೂ ಗೌಳಿ ಸಮಾಜದೊಂದಿಗೆ ಸಮ್ಮಿಳಿತಗೊಂಡಿದೆ. ಅಲ್ಲದೆ, ಎಮ್ಮೆಗಳ ಈ ಸ್ಪರ್ಧೆಗೆ ನೂರಾರು ವರ್ಷಗಳ ಇತಿಹಾಸ ಇದೆ. ಈ ಪರಂಪರೆ ಮನೋರಂಜನೆಯ ಜತೆಗೆ ಪ್ರಾಣಿ ಪ್ರೀತಿಗೂ ಸಹ ಸಾಕ್ಷಿಯಾಗಿದ್ದು, ಇದು ಅನುಕರಣೀಯ ಎಂದರು.

ಎಮ್ಮೆಗಳ ಓಟದ ಸ್ಪರ್ಧೆ ಪ್ರೇಕ್ಷಕರನ್ನು ರಂಜಿಸಿತು. ಸಮಾಜ ಸೇವಕ ಪೃಥ್ವಿ ಸಿಂಗ್, ಮಲ್ಲೇಶ ಚೌಗಲೆ, ಪ್ರವೀಣ ಪಾಟೀಲ, ಬಾಳು ಪಾಟೀಲ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net