

ಲಕ್ಕೂರು:ಕರಾಟೆಯಲ್ಲಿ ಗಿನ್ನೆಸ್ ದಾಖಲೆ ವಾಡಿ, ಕೋಲಾರಕ್ಕೆ ಕೀರ್ತಿ ತಂದ ಲಕ್ಕೂರು ಗ್ರಾಮದ ಎನ್.ತಾನೀಶ್ ಅವರು ತಮಿಳುನಾಡಿನ ಚೆನೈನಲ್ಲಿ ಅ.5ರಂದು ಭಾನುವಾರ ಎಸ್‌ಐವಿಇಟಿ ಕಾಲೇಜಿನನಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ವರ್ಲ್ಡ್ ಕರಾಟೆ ವಾಸ್ಟರ್ಸ್ ಅಸೋಸಿಯೇಷನ್‌ನಲ್ಲಿ ಭಾಗವಹಿಸಿ (ಲಾರ್ಜೆಸ್ಟ್ ಕಾಟೆ ಲೆಸನ್ ಇನ್ ಎ ಸಿಂಗಲ್ ವೇವ್) ವಿಶ್ವಮಟ್ಟದಲ್ಲಿ ಪರಿಚಿತವಾಗಿದ್ದಾರೆ.
ಶ್ವೇತಾಂಜಲಿ ಭರತನಾಟ್ಯ ಶಾಲೆ ಹಾಗೂ ವಿಶ್ವವಾನವ ಕುವೆಂಪು ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷೆ ಶ್ವೇತನಾಗರಾಜ್ ವಾತನಾಡಿ, ಎನ್.ತಾನೀಶ್ 30 ನಿಮಿಷ ನಿರಂತರವಾಗಿ ಕರಾಟೆ ಹಂತಗಳನ್ನು ಪ್ರದರ್ಶಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಕಠಿಣ ತರಬೇತಿ, ಸಂಪೂರ್ಣ ಸಮರ ಕಲೆಗಳ ಮೂಲಕ ಈ ಸಾಧನೆ ವಾಡಿದ್ದಾನೆ. ಇದು ನಾಡಿಗೆ ಹಾಗೂ ದೇಶಕ್ಕೆ ಹೆಮ್ಮೆಯ ವಿಷಯ ಎಂದರು.