

ಚಿಕ್ಕೋಡಿ: ಭೂಮಿ ಖರೀದಿ ವ್ಯಾಜ್ಯ ನ್ಯಾಯಾಲಯದಲ್ಲಿ ಇರುವಾಗಲೇ ಚಿಕ್ಕೋಡಿ ಉಪನೋಂದಣಾಧಿಕಾರಿ ಆಸ್ತಿ ಮಾರಾಟ ಮಾಡಿ ನ್ಯಾಯಾಲಯದ ಆದೇಶ
ಉಲ್ಲಂಸಿದ್ದಾರೆ. ಹದಿನೈದು ದಿನದ ಒಳಗಾಗಿ ನ್ಯಾಯ ಒದಗಿಸಬೇಕು. ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮಿನಿವಿಧಾನಸೌಧದ ಎದುರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಮಿನಿವಿಧಾನಸೌಧದ ವರೆಗೆ ಪ್ರತಿಭಟನೆ ಕೈಗೊಂಡು ಬಳಿಕ ತಹಸೀಲ್ದಾರ್‌ಗೆ ಶುಕ್ರವಾರ ಮನವಿ ಸಲ್ಲಿಸಿದರು.
ನಾಗರಮುನ್ನೋಳಿ ಗ್ರಾಮದ ಸಿದ್ದಪ್ಪ ಬಂಬಲವಾಡೆ ಮಾತನಾಡಿ, ಆಸ್ತಿಗಳನ್ನು ಮಾರಾಟ ಮಾಡಬಾರದೆಂದು ನ್ಯಾಯಾಲಯ ಆದೇಶ ನೀಡಿದೆ. ಆದರೆ, ಅಧಿಕಾರಿಗಳು ಒತ್ತಡಕ್ಕೆ ಮಣಿದು ಆಸ್ತಿ ಮಾರಾಟ ಮಾಡಿ ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವ್ವಕ್ಕ ಚಿಕ್ಕೋಡಿ ಮಾತನಾಡಿ, ಹಂಚನಾಳ ಗ್ರಾಮದಲ್ಲಿ ನನ್ನ ಹೆಸರಲ್ಲಿ ಇರುವ ನಾಲ್ಕು ಎಕರೆ ಆಸ್ತಿ ವ್ಯಾಜ್ಯ ನ್ಯಾಯಾಲಯದಲ್ಲಿದೆ. ಆದರೆ, ನ್ಯಾಯಾಲಯ ಆದೇಶ ಉಲ್ಲಂಸಿ ಆಸ್ತಿಗಳ ಖರೀದಿ ದಸ್ತ ನೋಂದಣಿ ಮಾಡಿರುವುದು ಅನ್ಯಾಯ. ಅಧಿಕಾರಿಗಳ ನಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಶಂಕರ ವಡೇರ, ವಾಸಪ್ಪ ಬಂಬಲವಾಡೆ, ನಿಂಗಪ್ಪ ಚಿಕ್ಕೋಡಿ, ಮಹಾದೇವ ಬಾಗೇವಾಡಿ ಇತರರು ಇದ್ದರು.17-4
-----------------------