ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಲಿ

web3
ಚನ್ನಮ್ಮನ ಕಿತ್ತೂರು ವಕೀಲರ ಸಂಘದಿಂದ ವಕೀಲ ಪ್ರೀತಂ ಮೇಲಿನ ಹಲ್ಲೆ ಖಂಡಿಸಿ ಉಪತಹಸೀಲ್ದಾರ್ ಪಿ.ವಿ. ದಂದೂರಗೆ ಮನವಿ ಸಲ್ಲಿಸಿದರು. ವಿಶ್ವನಾಥ ಬಿಕ್ಕನ್ನವರ, ಎಂ.ಎಸ್. ಸಾಣಿಕೊಪ್ಪ, ಎಂ.ಎಸ್. ಹಂಚಿನಮನಿ ಇತರರಿದ್ದರು.
Published on

ಚನ್ನಮ್ಮನ ಕಿತ್ತೂರು: ಚಿಕ್ಕಮಗಳೂರಿನ ವಕೀಲ ಪ್ರೀತಂ ಎನ್.ಟಿ. ಅವರ ಮೇಲೆ ಪೋಲಿಸರು ನಡೆಸಿದ ದೌರ್ಜನ್ಯ ಖಂಡಿಸಿ ಸೋಮವಾರ ಕಲಾಪದಿಂದ ಹೊರಗುಳಿದು ಕಿತ್ತೂರು ವಕೀಲರ ಸಂಘದಿಂದ ಉಪತಹಸೀಲ್ದಾರ್ ಪಿ.ವಿ. ದಂದೂರಗೆ ಮನವಿ ಸಲ್ಲಿಸಿದರು.

ವಕೀಲರ ಸಂಘದ ಅಧ್ಯಕ್ಷ ವಿಶ್ವನಾಥ ಬಿಕ್ಕನ್ನವರ ಮಾತನಾಡಿ, ಈಚೆಗೆ ಚಿಕ್ಕಮಗಳೂರಿನಲ್ಲಿ ಪೊಲೀಸರು ಕಾನೂನು ಬಾಹಿರವಾಗಿ ವಕೀಲ ಪ್ರೀತಂ ಮೈಗೆ ಬಾಸುಂಡೆ ಬರುವ ಹಾಗೆ ಹೊಡೆದು ಗುಂಡಾವರ್ತನೆ ತೋರಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ವಕೀಲರ ಮೇಲೆ ದಾಖಲಿಸಿದ ಸುಳ್ಳು ಕೇಸುಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ವಕೀಲರ ಸಂಘದ ಉಪಾಧ್ಯಕ್ಷ ಎಂ.ಎಸ್. ಸಾಣಿಕೊಪ್ಪ, ಕಾರ್ಯದರ್ಶಿ ಎಂ.ಎಸ್. ಹಂಚಿನಮನಿ, ಸಹಕಾರ್ಯದರ್ಶಿ ಎಸ್.ಎ. ಮುತ್ತೆನ್ನವರ, ಖಜಾಂಚಿ ವಿ.ಐ. ಇನಾಮದಾರ, ಎ.ಬಿ. ಲದ್ದಿಗಟ್ಟಿ, ಆರ್.ಜಿ. ಹಿರೇಮಠ, ಎಸ್.ಎಂ. ಹಳೇಮನಿ, ಎನ್.ಬಿ. ಚೌಡನ್ನವರ, ಬಿ.ಕೆ. ಸವದತ್ತಿ, ಎಂ.ಎಸ್. ಪಾಟೀಲ, ವಿ.ಜಿ. ಗಡಬಿಡಿ, ಬಿ.ಎಂ. ಬುಡಶೆಟ್ಟಿ, ವಾಣಿ ಬಜೆನ್ನವರ ಇತರರಿದ್ದರು.

ಸವದತ್ತಿ ವರದಿ: ಚಿಕ್ಕಮಗಳೂರಿನ ವಕೀಲ ಪ್ರೀತಂ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ್ದನ್ನು ಖಂಡಿಸಿ ತಾಲೂಕು ನ್ಯಾಯವಾದಿಗಳ ಸಂಘದಿಂದ ಶಿರಸ್ತೆದಾರ ಶಶಿರಾಜ ವನಕೆಗೆ ಸೋಮವಾರ ಮನವಿ ಸಲ್ಲಿಸಲಾಯಿತು. ವಕೀಲ ಸಂಘದ ಅಧ್ಯಕ್ಷ ಎಂ.ಎನ್.ಮುತ್ತಿನ, ಸಂಘದ ಉಪಾಧ್ಯಕ್ಷ ಜೆ. ಬಿ.ಮುನವಳ್ಳಿ, ಎಂ.ಎ್.ಬಡಿಗೇರ, ಎಂ.ಜಿ.ಮಲ್ಲಾಡ, ಎಂ.ಎಸ್.ಪಂಚೆನವರ, ಡಿ.ಎ.ಜಮಾದಾರ, ಎನ್.ಎಸ್.ನಾಯ್ಕರ, ಪಿ.ಎಸ್.ಮಾನಗಾವ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net