ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯ: ಗ್ರೇಡ್-2 ತಹಸೀಲ್ದಾರ್ ಕುಮಾರಸ್ವಾಮಿ ಮನವಿ

12kudligii1
ಕೂಡ್ಲಿಗಿಯಲ್ಲಿ ಹಿಂದು ಪರ ಸಂಘಟನೆಗಳು ಹಿಂದುಗಳ ಹತ್ಯೆ ಖಂಡಿಸಿ ತಹಸೀಲ್ದಾರ್ ಮೂಲಕ ಸಿಎಂಗೆ ಮನವಿ ಸಲ್ಲಿಸಿದವು.
Published on

ಕೂಡ್ಲಿಗಿ: ಹಿಂದುಗಳ ಹತ್ಯೆ ಖಂಡಿಸಿ ಹಿಂದು ಪರ ಸಂಘಟನೆಗಳಿಂದ ಗ್ರೇಡ್-2 ತಹಸೀಲ್ದಾರ್ ಕುಮಾರಸ್ವಾಮಿ ಮೂಲಕ ಮುಖ್ಯಮಂತ್ರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ವಿಶ್ವ ಹಿಂದು ಪರಿಷತ್ ಹಿರಿಯ ಸದಸ್ಯ ರಾಮು ಕಾಟ್ವಾ ಮಾತಾನಾಡಿ, ಹಿಂದು ದೇಶದಲ್ಲಿಯೇ ಹಿಂದುಗಳಿಗೆ ರಕ್ಷಣೆ ಇಲ್ಲಾವಾಗಿದೆ. ಕೊಲೆಗಡುಕರಿಗೆ ಕಠಿಣ ಕ್ರಮ ಜರುಗಿಸಿ ಹಿಂದುಗಳ ರಕ್ಷಣೆ ಸರ್ಕಾರ ಮಾಡಬೇಕು. ಇಲ್ಲವಾದಲ್ಲಿ ರಾಜ್ಯದ ಉದ್ದಗಲಕ್ಕೂ ಹಿಂದುಗಳು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಹಿಂದು ಸಂಘಟನೆಯ ಭರತ್ ರಾಮ್, ದುರುಗೇಶ್, ಗುಳಿಗಿ ವೀರೇಶ್, ಎಂ.ಎಸ್.ವಿಜಯಕುಮಾರ್, ಸೊಲ್ಲೇಶ್, ಸಪ್ತಗಿರಿ, ಆದಿತ್ಯ, ಹೇಮಂತ ಕಾಟ್ವಾ, ಗುನ್ನಳ್ಳಿ ಪ್ರವೀಣ, ವಿಜಯ್, ಕೆ. ಮಹಾಲಿಂಗ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net