ಮಾರ್ಗದರ್ಶನದಿಂದ ಜೀವನ ಹಸನು

26mnv01
Published on

ಮಾನ್ವಿ: ನಮ್ಮಲ್ಲಿನ ಕಲ್ಮಶಗಳನ್ನು ಹೊರಗೆ ಹಾಕಿ ಗುರುವಿನ ಮಾರ್ಗದರ್ಶನದಿಂದ ನಡೆದಾಗ ಜೀವನ ಹಸನಾಗುತ್ತದೆ ಎಂದು ಶಾಸಕ ಹಂಪಯ್ಯನಾಯಕ ಹೇಳಿದರು.

ನೀರಮಾನ್ವಿ ಸದ್ಗುರು ಸಿದ್ಧಾರೂಢ ಮಠದಲ್ಲಿ ಸದ್ಗುರು ಬಸವಾನಂದರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಸಿದ್ಧಾರೂಢ ಮಠದವರು ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ. ಮೂರು ದಿನ ಅಧ್ಯಾತ್ಮ ಚಿಂತನೆ ಕಾರ್ಯಕ್ರಮ ಏರ್ಪಡಿಸಿ ಎಲ್ಲರಿಗೂ ಜ್ಞಾನ ಮತ್ತು ಪ್ರಸಾದ ನೀಡುವುದು ದೊಡ್ಡ ಕಾರ್ಯವಾಗಿದೆ ಎಂದರು.

ಸಿದ್ಧಾರೂಢ ಮಠದ ಕಾರ್ಯಕ್ರಮ ಹಾಗೂ ಇತರ ಮಂಗಲ ಕಾರ್ಯಗಳಿಗೆ ಅನುಕೂಲವಾಗುವಂತೆ ಕಲ್ಯಾಣ ಮಂಟಪಕ್ಕೆ ಅನುದಾನ ನೀಡುವುದಾಗಿ ಶಾಸಕ ಭರವಸೆ ನೀಡಿದರು. ಮಠದ ಸದ್ಗುರು ಸೇವಕ ದೇವೇಂದ್ರಪ್ಪ ತಾತ ಮಾತನಾಡಿ, ಮಠಕ್ಕೆ ಶಾಸಕರ ಸೇವೆ ನಿರಂತರ ಇದೆ. ಮಠದ ಅವರಣದಲ್ಲಿ ಕಲ್ಯಾಣ ಮಂಟಪ ನಿರ್ಮಿಸಿದರೆ ಭಕ್ತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಪ್ರಮುಖರಾದ ಶರಣಪ್ಪ ನಾಯಕ ಗುಡದಿನ್ನಿ, ಬಸವರಾಜ ಜಾಲಾಪುರ ಕ್ಯಾಂಪ್, ನರಸಪ್ಪ, ಈರಣ್ಣ ಅಗಸರ, ನಿಂಗಣ್ಣ ಕುರುಬರ, ಬಸವರಾಜ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net