

ಹುಬ್ಬಳ್ಳಿ: ಮಕ್ಕಳು ರಾಜಕೀಯ ಪಟ್ಟು ಮತ್ತು ಕೌಶಲ ಕಲಿಯಬೇಕು. ಇದಕ್ಕೂ ಮೊದಲು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಶಿಕ್ಷಕರು ಮತ್ತು ಪಾಲಕರು ಮಾರ್ಗದರ್ಶನ ನೀಡಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ನಗರದ ಗೋಕುಲ ರಸ್ತೆಯ ಹೆಬಸೂರ ಭವನದಲ್ಲಿ ಸಿಐಐ ಯಂಗ್ ಇಂಡಿಯನ್ಸ್ (ವೈಐ) ಹುಬ್ಬಳ್ಳಿ ಚಾಪ್ಟರ್ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಕಲ್ಪಿತ ‘ಯಂಗ್ ಇಂಡಿಯನ್ಸ್ ಪಾರ್ಲಿಮೆಂಟ್ 2.0’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕೀಯ ಜಾಗೃತಿ ಎಂದು ಹೇಳಲೇಬೇಕಾಗುತ್ತದೆ. ಎಲ್ಲ ರಂಗದಲ್ಲಿಯೂ ಜಾಗೃತಿ, ತಿಳವಳಿಕೆ ಮೂಡಿಸಿದಂತೆ ರಾಜಕೀಯ ಜಾಗೃತಿಯೂ ಅತ್ಯಗತ್ಯ. ಇಂದಿನ ಯುವಕರು ರಾಜಕಾರಣಕ್ಕೂ ಬರಬೇಕು ಎಂದು ಸಲಹೆ ನೀಡಿದರು.
ವೈಐ ಹು-ಧಾ ಚೇರ್ಮನ್ ರಾಹುಲ್ ಸುರಾನ, ಸಂಸ್ಥಾಪ ಚೇರ್ಮನ್ ಡಾ. ಶ್ರೀನಿವಾಸ ಜೋಶಿ ಮಾತನಾಡಿ, ರಾಷ್ಟ್ರೀಯ ಮಟದಲ್ಲಿ ಪರಿಣಾಮ ಬೀರುವ ಸಂಬಂಧ ಇಂಥ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ನಿರ್ಗಮಿತ ಚೇರ್ಮನ್ ಡಾ. ನಾಗರಾಜ ನಾಯಕ್, ಕೋ ಚೇರ್ಮನ್ ಡಾ. ಸಮೀರ ಮಂಗಳವೇಢೆ, ಮುಕೇಶ ಜೈನ್, ಕೋಮಲ್ ಶಾ, ಇತರರು ಇದ್ದರು.