ವಿದ್ಯಾರ್ಥಿನಿಯನ್ನು ಕೋಣೆಗೆ ಕರೆದ ಅತಿಥಿ ಶಿಕ್ಷಕ

cal
Published on

ಕಲಬುರಗಿ: ಇಲ್ಲಿನ ಜ್ಞಾನ ಗಂಗೆಯಲ್ಲಿ ವಿದ್ಯಾರ್ಥಿನಿಯೊಬ್ಬರಿಗೆ ಅತಿಥಿ ಶಿಕ್ಷಕರೊಬ್ಬರು ನಿನ್ನ ಮೇಲೆ ಪ್ರೀತಿ ಉಂಟಾಗಿದೆ. ನನ್ನೊಂದಿಗೆ ಸಹಕರಿಸು, ಕೋಣೆಗೆ ಬಾ ಎನ್ನುವ ಮೂಲಕ ಲೈಂಗಿಕ ಕಿರುಕುಳ ನೀಡಿದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಡಿಯೋದಲ್ಲಿರುವುದು ಗುಲ್ಬರ್ಗ ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ಅತಿಥಿ ಉಪನ್ಯಾಸಕರೊಬ್ಬರ ಧ್ವನಿ ಎನ್ನಲಾಗುತ್ತಿದೆ. ವಿದ್ಯಾರ್ಥಿನಿಗೆ ಪೀಡಿಸಿದ್ದಾನೆ. ವಿದ್ಯಾರ್ಥಿನಿ ಎಷ್ಟೋ ಸಲ ನೋ ಸರ್ ಎಂದು ಹೇಳಿದರೂ ಬಿಡದ ಉಪನ್ಯಾಸಕ ನಿನ್ನ ಮೇಲೆ ಪ್ರೇಮ ಹುಟ್ಟಿದೆ ಎಂದು ಹೇಳುತ್ತಲೇ ಪತಿಪತ್ನಿಯರ ಉದಾಹರಣೆ ನೀಡುತ್ತಾ ಮನವಿ ಒಪ್ಪಿಕೊಳ್ಳುವಂತೆ ಪೀಡಿಸುತ್ತಾನೆ.
ಉಪನ್ಯಾಸಕ. ಆಡಿಯೋದಲ್ಲಿ ವಿದ್ಯಾರ್ಥಿನಿಗೆ ನೀನು ನನ್ನ ಗರ್ಲ್ ಫ್ರೆಂಡ್ ಆಗು ಎಂದಾಗ ಆಕೆ ನೋ ಸರ್. ನಿಮ್ಮ ಮೇಲೆ ಅಂಥ ಭಾವನೆ ಇಲ್ಲ ಎಂದರು ಕಾಮುಕ ಉಪನ್ಯಾಸಕ ನನಗೆ ಇಂಟ್ರೆಸ್ಟ್ ಇದೆ. ನನ್ನ ರಿಕ್ವೆಸ್ಟ್ ಒಪ್ಪಿಕೊ ಎಂದಾಗ ವಿದ್ಯಾರ್ಥಿನಿ ನೀವು ಹೀಗೆ ಕೇಳುತ್ತೀರಿ ಎಂದರೆ ನನಗೆ ನಂಬಲು ಆಗುತ್ತಿಲ್ಲ ಸರ್ ಎಂದರೂ ನಾಳೆ ನೀನು ಕೋಣಗೆ ಬಾ ಕಿಸ್ ಮಾಡಿ, ಹಗ್ ಮಾಡಿ ಕೇಳುತ್ತೇನೆ ಒಪ್ಪಿಸಲು ನಿರಂತರವಾಗಿ ಪೀಡಿಸಿದ್ದಾನೆ.
ಸುಮಾರು ೨೩ ನಿಮಿಷ ೪೯ ಸೆಕೆಂಡ್ ಸಂಭಾಷಣೆಯ ಆಡಿಯೊದಲ್ಲಿ ವಿದ್ಯಾರ್ಥಿನಿಗೆ ಕೊನೆಗೆ ಮೊಬೈಲ್‌ನ¯್ಲೆÃ ಸೆಕ್ಸ್ ಮಾಡೋಣ ಎಂದು ಉಪನ್ಯಾಸಕ ಪೀಡಿಸುತ್ತಾನೆ. ಮುಂದುವರೆದು ವಿದ್ಯಾರ್ಥಿಗಳ ಮೇಲೆ ಕ್ರಷ್ ಆಗಬಾರದಾ? ಎಂದು ಕೇಳುತ್ತಾನೆ. ಆಗಲೂ ನಯವಾಗಿ ತಿರಸ್ಕರಿಸಿ ನೀವು ನಮಗೆ ಸರಿಯಾಗಿ ಗೈಡ್ ಮಾಡಬೇಕು. ಒಳ್ಳೆಯ ಮಾರ್ಗದರ್ಶನ ನೀಡಬೇಕು ಎಂದು ಆಕೆ ಹೇಳಿದರೂ ಜಗ್ಗದೆ ತನ್ನದೆ ರಾಗ ಹಾಡಿಕೊಂಡು ಹೋಗಿದ್ದಾನೆ ಈ ಕಾಮುಕ ಶಿಕ್ಷಕ.
ಆಡಿಯೋ ವೈರಲ್ ಆಗುತ್ತಿದ್ದಂತೆ ಗುವಿವಿ ಹಂಗಾಮಿ ಕುಲಪತಿ ಪ್ರೊ.ವಿ.ಟಿ. ಕಾಂಬಳೆ, ಈ ಕುರಿತು ವರದಿ ನೀಡುವಂತೆ ವಿಭಾಗದ ಮುಖ್ಯಸ್ಥರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ದೂರು ದಾಖಲಾಗಿಲ್ಲ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net