

ಕೊಪ್ಪಳ (ಯಲಬುರ್ಗಾ):ವಿವಿಧ ಬೇಡಿಕೆ ಈಡೇಸಿರುವಂತೆ ಒತ್ತಾಯಿಸಿ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಪ್ರಭಾರ ಪ್ರಾಚಾರ್ಯ ಬಸವಂತಪ್ಪ ಅವರ ಮೂಲಕ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ 14 ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಹಾಗೂ ಕಾಯಂ ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬೇಕು. ಪ್ರಸಕ್ತ ಸಾಲಿನ ಶೈಕ್ಷಣಿಕ ವ?ರ್ದಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ನಂತರ ಉಂಟಾಗಿರುವ ಗೊಂದಲ ಸರಿಪಡಿಸಬೇಕು.
ಅತಿಥಿ ಉಪನ್ಯಾಸಕರ ಕಾರ್ಯಭಾರ ಹಾಗೂ ಸಂಬಳ ನೀಡಿಕೆ ಕುರಿತು ಶೀಘ್ರ ನಿರ್ಣಯ ಕೈಗೊಳ್ಳಬೇಕು. ಹಲವು ವರ್ಗಳಿಂದ ಅತಿಥಿ ಉಪನ್ಯಾಸಕರು ನಿರಂತರ ಶೋಣೆಗೆ ಒಳಗಾಗುತ್ತಿದ್ದು, ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಅತಿಥಿ ಉಪನ್ಯಾಸಕರಾದ ವಿಶ್ವನಾಥ ತೊಂಡಿಹಾಳ, ಮಂಜುನಾಥ ಕಡೆಕೊಪ್ಪ, ಅರ್ಜುನ, ಶಿಲ್ಪಾ, ಲಕ್ಷ್ಮಣ ಹಿರೇಮನಿ, ಪ್ರಲ್ಹಾದ ಹಾನಗಲ್, ಶಿಲ್ಪಾ ಇತರರು ಇದ್ದರು.