ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೆ ಆಕ್ಷೇಪ: ಮಂಡ್ಯ ವಿವಿ ಎದುರು ಅತಿಥಿ ಉಪನ್ಯಾಸಕರ ಪ್ರತಿಟನೆ

1 (2)
Published on

ಮಂಡ್ಯ: ಕಾಲೇಜು ಶಿಕ್ಷಣ ಇಲಾಖೆಗಳ ನಿಯಮಾನುಸಾರ ಪ್ರಕಾರ ಸೇವೆಯಿಂದ ಬಿಡುಗಡೆಯಾದ ಅತಿಥಿ ಉಪನ್ಯಾಸಕರನ್ನು ಏಕಾಏಕಿ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿರುವುದನ್ನು ಖಂಡಿಸಿ ಸೋಮವಾರ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ನಗರದ ಮಂಡ್ಯ ವಿಶ್ವವಿದ್ಯಾನಿಲಯದ ಎದುರು ಪ್ರತಿಭಟನೆ ನಡೆಸಿದರು.

ಅತಿಥಿ ಉಪನ್ಯಾಸಕರನ್ನು ಜೀತಪದ್ಥತಿಯಂತೆ ನೋಡುತ್ತಿರುವ ಕ್ರಮ ಖಂಡನೀಯವಾದುದು ಹಾಗೂ ಅವರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲರಾದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಸೇವೆಯಿಂದ ಬಿಡುಗಡೆಯಾದ ಅತಿಥಿ ಉಪನ್ಯಾಸಕರು ಸಾಮಾನ್ಯ ಪ್ರಜೆಯಾಗಿರುತ್ತಾರೆ. ಯಾವುದೇ ಸರ್ಕಾರಿ, ಅರೆಸರ್ಕಾರಿ ಅಥವಾ ಇನ್ನಾವುದೇ ರೀತಿಯ ನೌಕರರ ನಿಯಾಮಾವಳಿಗೆ ಒಳಪಡುವುದಿಲ್ಲ. ಆದರೂ ಕುಲಪತಿಗಳು ಆಗಸ್ಟ್ ಮತ್ತು ಸೆಪ್ಟಂಬರ್‌ನಲ್ಲಿ ನಡೆಯುವ ಪರೀಕ್ಷಾ ಕಾರ್ಯಗಳಿಗೆ ನೇಮಿಸಿರುವುದು ಕಾನೂನು ಬಾಹಿರ. ಆದ್ದರಿಂದ ಈ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಜು.8 ರಂದು ಸೇವೆಯಿಂದ ಬಿಡುಗಡೆಯಾಗಿದ್ದರೂ 28ರವರೆಗೆ ಯಾವುದೇ ಗೌರವಧನ ವಿಲ್ಲದೇ ಮಂಡ್ಯ ವಿವಿಯಲ್ಲಿ ಕಾರ್ಯನಿರ್ವಹಿಸಿದ್ದೇವೆ. ಇನ್ನು ಮಂಡ್ಯ ವಿವಿಯಲ್ಲದೇ ಮೈಸೂರು ವಿವಿ ಹಾಗೂ ಇಡೀ ರಾಜ್ಯದಾದ್ಯಂತ ಇರುವ ಸರ್ಕಾರಿ ಪದವಿ ಕಾಲೇಜುಗಳಲ್ಲಿಯೂ ಪರೀಕ್ಷಾ ಕಾರ್ಯಗಳನ್ನು ಬಹಿಷ್ಕರಿಸಿದ್ದೇವೆ ಎಂದರು.

ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಎಸ್.ನಾಗರಾಜು, ಎಸ್.ಮಂಜು, ಗಣೇಶ್, ಶ್ರೀನಿವಾಸ್, ಪ್ರಕಾಶ್, ದಿವ್ಯಾ, ಬಿಂದುರಾಣಿ, ಕಿರಣ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net