ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ

application
Published on

ಬೆಳಗಾವಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮುರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜು ಹಾಗೂ ಮೌಲಾನಾ ಆಜಾದ್​ ಪದವಿ ಪೂರ್ವ ಕಾಲೇಜುಗಳಲ್ಲಿ 2025&26ನೇ ಸಾಲಿಗೆ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೂಲಿಕಟ್ಟಿಯ ಡಾ. ಎಪಿಜೆ ಅಬ್ದುಲ್​ ಕಲಾಂ ಪದವಿ ಪೂರ್ವ ವಸತಿ ಕಾಲೇಜು 11, ರಾಮತೀರ್ಥ ನಗರದ ಮೌಲಾನಾ ಆಜಾದ ಪದವಿ ಪೂರ್ಣ ಕಾಲೇಜು 7, ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು 10, ಚಿಕ್ಕೋಡಿಯ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು 4, ಮೂಡಲಗಿ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು 10 ವಿವಿಧ ವಿಷಯಗಳ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಅರ್ಹರು ಏ.5ರಿಂದ 17ವರೆಗೆ ಸಂಜೆ 5 ಗಂಟೆಯೊಳಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ರಾಮತೀರ್ಥ ನಗರದ ಮೌಲಾನಾ ಆಜಾದ್​ ಅಲ್ಪಸಂಖ್ಯಾತರ ಭವನಕ್ಕೆ ಅರ್ಜಿ ಸಲ್ಲಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net