ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಆಗ್ರಹ: ಹಡಗಲಿಯಲ್ಲಿ ಎಐಎಸ್‌ಎಫ್ ಹೋರಾಟ

231221 Protest by AISF in Shastri circle Hadagali
ಹೂವಿನಹಡಗಲಿಯ ಶಾಸ್ತ್ರಿ ವೃತ್ತದಲ್ಲಿ ಎಐಎಸ್‌ಎಫ್‌ನಿಂದ ಪ್ರತಿಭಟನೆ ನಡೆಸಲಾಯಿತು.
Published on

ಹೂವಿನಹಡಗಲಿ: ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ಶಾಸ್ತ್ರಿ ವೃತ್ತದಲ್ಲಿ ಎಐಎಸ್‌ಎಫ್ ಸಂಘಟನೆ ಗುರುವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಎ.ಎಚ್.ಮಹೇಂದ್ರಗೆ ಮನವಿ ಸಲ್ಲಿಸಿತು.

ಸಂಘಟನೆ ಮುಖಂಡ ಶಾಂತರಾಜ ಜೈನ್ ಮಾತನಾಡಿ, ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರು ಸರ್ಕಾರದಿಂದ ಕೊಡುವ ಗೌರವ ಧನದಿಂದ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅವರ ಬೇಡಿಕೆಗಳನ್ನು ಈಡೇಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು. ತಾಲೂಕು ಸಂಚಾಲಕ ಸುರೇಶ ಹಲಗಿ ಮಾತನಾಡಿ, ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಇಲ್ಲದಂತಾಗಿದೆ. ಸರ್ಕಾರ ಕೂಡಲೇ ಸೇವೆ ಕಾಯಂಗೊಳಿಸಬೇಕು ಒತ್ತಾಯಿಸಿದರು. ಪ್ರಮುಖರಾದ ವಿರೂಪಾಕ್ಷ ಅಂಕ್ಲಿ, ಮುಖಂಡರಾದ ಬಸವರಾಜ ಸಂಶಿ, ಸಂತೋಷ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net