ಗುಡಿಹಾಳ ಕೆರೆ ಸ್ವಚ್ಛತಾ ಕಾಮಗಾರಿ ಬೇಗ ಮುಗಿಸಿ

Kvtl Mla
ಗುಡಿಹಾಳ ಕೆರೆಗೆ ಶನಿವಾರ ಶಾಸಕ ಆರ್.ಬಸನಗೌಡ ತುರ್ವಿಹಾಳ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ರಾಜಾಸಾಬ್ ಸೈಕಲ್, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ವೆಂಕಟರಡ್ಡಿ ಹಾಲಾಪುರ, ಕರೆಯಪ್ಪ ಬೆಂಗಳೂರು ಇತರರಿದ್ದರು.
Published on

ಕವಿತಾಳ: ಸಮೀಪದ ಪಾಮನಕಲ್ಲೂರು ಗ್ರಾಪಂ ವ್ಯಾಪ್ತಿಯ ಗುಡಿಹಾಳ ಕೆರೆ ಸ್ವಚ್ಛತಾ ಕಾಮಗಾರಿಯನ್ನು ಶಾಸಕ ಆರ್.ಬಸನಗೌಡ ತುರ್ವಿಹಾಳ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ತುಂಗಭದ್ರಾ ಎಡದಂಡೆ ನಾಲೆ ಪಕ್ಕದಲ್ಲಿ ಗುಡಿಹಾಳ ಗ್ರಾಮದ ಕೆರೆಯನ್ನು 20 ವರ್ಷಗಳಿಂದ ನಿರ್ಮಿಸಲಾಗಿತ್ತು. ಐದು ಕೋಟಿ ರೂ. ವೆಚ್ಚದಲ್ಲಿ ಪುನಶ್ಚೇತನಗೊಳಿಸಿ ನೀರು ತುಂಬಿಸಲಾಗಿತ್ತು. ಆದರೆ, ನೀರು ಮಲಿನಗೊಂಡು ಕುಡಿಯಲು ಯೋಗ್ಯವಾಗಿರಲಿಲ್ಲ.

ಹೀಗಾಗಿ ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದಿದ್ದರು. ಇದಕ್ಕೆ ಸ್ಪಂದಿಸಿದ ಶಾಸಕರು, ಕೆರೆ ಸ್ವಚ್ಛಗೊಳಿಸಿ ನೀರು ನಿಲ್ಲುವಂತೆ ಮಾಡುವ ಸಲುವಾಗಿ ತಳದಲ್ಲಿ ಗುಣಮಟ್ಟದ ಕಪ್ಪು ಮಣ್ಣು ಹಾಕಿ ನೀರು ತುಂಬಿಸುವ ಕೆಲಸಕ್ಕೆ ಚಾಲನೆ ನೀಡಿದ್ದರು. ಶನಿವಾರ ಕೆರೆ ಕಾಮಗಾರಿ ವೀಕ್ಷಣೆ ಮಾಡಿದ ಶಾಸಕ ಬಸನಗೌಡ ತುರ್ವಿಹಾಳ ಅವರು, ತ್ವರಿತವಾಗಿ ಕಾಮಗಾರಿ ಮುಗಿಸಿ ನೀರು ತುಂಬಿಸಬೇಕು ಎಂದು ಸೂಚಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ರಾಜಾಸಾಬ್ ಸೈಕಲ್, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ವೆಂಕಟರಡ್ಡಿ ಹಾಲಾಪುರ, ಕರೆಯಪ್ಪ ಬೆಂಗಳೂರು, ಗುತ್ತಿಗೆದಾರ ಬಲವಂತರಾಯಗೌಡ ವಟಗಲ್, ತಾಪಂ ಮಾಜಿ ಸದಸ್ಯ ಬಸಪ್ಪ ಜಂಗಮರಹಳ್ಳಿ, ಗ್ರಾಪಂ ಸದಸ್ಯ ದುರುಗಪ್ಪ, ಮಾಜಿ ಸದಸ್ಯ ಅಮರೇಶ ಕಲ್ಲೂರು, ಬಸವರಾಜ ಕುರ್ಡಿ, ನಾಗಲಿಂಗಪ್ಪ ಚಲುವಾದಿ, ಅಮರೇಗೌಡ, ರಾಮಣ್ಣ ನಾಯಕ, ಪಿಡಿಒ ಕೃಷ್ಣ ಹುನಗುಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net