ಮೋದಿಗಾಗಿ ಸೈಕಲ್ ಜಾಥಾ

IMG-20231227-WA0007.jpg
Published on

ಹುಬ್ಬಳ್ಳಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಹಾಗೂ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಲೆಂದು ಪ್ರಾಥಿರ್ಸಿ ಶ್ರೀಕ್ಷೇತ್ರ ಗುಡ್ಡಾಪುರ ದಾನಮ್ಮದೇವಿಗೆ ಇಲ್ಲಿನ ಭಕ್ತರು ಸೈಕಲ್ ಜಾಥಾ ಹಮ್ಮಿಕೊಂಡಿದ್ದಾರೆ.

ಹುಬ್ಬಳ್ಳಿಯ ವೀರಯ್ಯಸ್ವಾಮಿ ಸಾಲಿಮಠ ಅವರ ನೇತೃತ್ವದಲ್ಲಿ ಏರ್ಪಡಿಸಿರುವ ಸೈಕಲ್ ಜಾಥಾಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಸಿರು ನಿಶಾನೆ ತೋರಿದರು.

ರಂಗಾ ಬದ್ದಿ, ಶಿವಾನಂದ ಜಂಬಗಿಮಠ, ಚನ್ನಬಸವಣ್ಣ ನಿಂಬಿಕಾಯಿ, ಚನ್ನಬಸಯ್ಯ ಹಿರೇಮಠ, ಗುರು ಬಿಚಗತ್ತಿಮಠ, ಕಲ್ಲಯ್ಯ ಕುರಡಿಕೇರಿ, ಪ್ರಕಾಶ ಕುಲಕರ್ಣಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net