ಮನೆ ನಿರ್ಮಾಣಕ್ಕೆ ಗುದ್ದಲಿಪೂಜೆ : ಬಡ ಕುಟುಂಬಕ್ಕೆ ಶತಮಾನೋತ್ಸವದ ಕೊಡುಗೆ

New Project (15)
Published on

ಕಡಬ: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂವು ತನ್ನ ಶತಮಾನೋತ್ಸವ ಸವಿ ನೆನಪಿಗಾಗಿ ದಾನಿಗಳ ನೆರವಿನೊಂದಿಗೆ ಚಾರ್ವಾಕ ಗ್ರಾಮದ ಅಜ್ಜೀಲು ಎಂಬಲ್ಲಿ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಿಸಲಿದ್ದು, ಗುದ್ದಲಿಪೂಜೆ ಬುಧವಾರ ನಡೆಯಿತು.

ಧ.ಗ್ರಾ.ಯೋಜನೆಯ ಕಡಬ ತಾಲೂಕಿನ ಯೋಜನಾಧಿಕಾರಿ ಮೇದಪ್ಪ ನಾವೂರು ಗುದ್ದಲಿಪೂಜೆ ನೆರವೇರಿಸಿದರು. ಕಾಣಿಯೂರು ಗ್ರಾ.ಪಂ. ಅಧ್ಯಕ್ಷ ವಿಶ್ವನಾಥ ಕೊಪ್ಪ, ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ, ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ತೇಜ ಕುವಾರಿ ಉದ್ಲಡ್ಡ, ಕೀರ್ತಿ ಕುವಾರಿ ಅಂಬುಲ, ಸುಲೋಚನಾ ಮಿಯೋಳ್ಪೆ, ಚಾರ್ವಾಕ ಪ್ರಾ.ಕೃ.ಪ.ಸ.ಸಂದ ವಾಜಿ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ನಿರ್ದೇಶಕರಾದ ವಿಶ್ವನಾಥ ದೇವಿನಗರ, ಪರಮೇಶ್ವರ ಅನಿಲ, ಸುಂದರ ದೇವಸ್ಯ, ದಿವಾಕರ ಮರಕ್ಕಡ, ಲೋಕೇಶ್ ಅತಾಜೆ, ಶೀಲಾವತಿ ಮುಗರಂಜ, ಕಮಲ ಮುದುವ, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂದ ಅಧ್ಯಕ್ಷ ಸತ್ಯನಾರಾಯಣ ಕಲ್ಲೂರಾಯ ಚಾರ್ವಾಕ ಮತ್ತಿತರರಿದ್ದರು.

ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂದ ಅಧ್ಯಕ್ಷ ಗಣೇಶ್ ಉದನಡ್ಕ ಸ್ವಾಗತಿಸಿದರು. ಸಂದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶೋಕ್ ಗೌಡ ನಿರೂಪಿಸಿದರು. ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net