ಕೃಷ್ಣಾಪುರ, ಕೋಡಿಕಲ್‌ನಲ್ಲಿ ಅಂಗನವಾಡಿಗೆ ಗುದ್ದಲಿಪೂಜೆ

New Project (21)
Published on

ಗುರುಪುರ: ಮಂಗಳೂರು ನಗರ ಪಾಲಿಕೆಯ ಕೃಷ್ಣಾಪುರ ಮತ್ತು ಕೋಡಿಕಲ್‌ನಲ್ಲಿ ತಲಾ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ 2 ಅಂಗನವಾಡಿ ಕಟ್ಟಡಗಳಿಗೆ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಇತ್ತೀಚೆಗೆ ಗುದ್ದಲಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿ, ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರಿ ಜಾಗ ಗುರುತಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಮಂಗಳೂರು ತಹಸೀಲ್ದಾರ್‌ಗೆ ಸೂಚಿಸಲಾಗಿದೆ. ಉತ್ತರ ಕ್ಷೇತ್ರದಲ್ಲಿ 45ಕ್ಕೂ ಹೆಚ್ಚು ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ವಾಣವಾಗಬೇಕಿದೆ. ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರದ ಸೌಲಭ್ಯಗಳು ಅಂಗನವಾಡಿಗಳ ಮೂಲಕವೇ ಕಾರ್ಯಗತಗೊಳ್ಳುವುದರಿಂದ ಈ ಮೂಲ ವ್ಯವಸ್ಥೆ ಸದೃಢಗೊಳ್ಳಬೇಕಿದೆ ಎಂದರು.

ಮನಪಾ ಮೇಯರ್ ಮನೋಜ್ ಕುವಾರ್ ವಾತನಾಡಿ, ನಗರ ಪ್ರದೇಶದಲ್ಲಿ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಅಗತ್ಯವಿರುವ ಸ್ಥಳ ಗುರುತಿಸುವಿಕೆಗೆ ಪಾಲಿಕೆಯೂ ನೆರವಾಗಲಿದೆ. ಮಂಗಳೂರು ಉತ್ತರ ಕ್ಷೇತ್ರಕ್ಕೆ ಕ್ರೀಡಾಂಗಣ ಹಾಗೂ ಕೂಳೂರಿನಲ್ಲಿ ಕಾರ್ಯಕ್ರಮ ಆಯೋಜನೆಗೆ ಸ್ಥಳ ಅಭಿವೃದ್ಧಿಪಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.

ಕಾರ್ಪೊರೇಟರ್ ಲಕ್ಷ್ಮೀ ಎಸ್.ದೇವಾಡಿಗ, ಎಇಇ ಫರಿದಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ ಎನ್., ಮೇಲ್ವಿಚಾರಕಿ ಭವ್ಯಾ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ತಿಲಕ್‌ರಾಜ್ ಕೃಷ್ಣಾಪುರ, ಲಕ್ಷ್ಮೀಶ ದೇವಾಡಿಗ, ಭರತ್‌ರಾಜ್ ಕೃಷ್ಣಾಪುರ, ಸದಾನಂದ ಸನಿಲ್, ಸತೀಶ್ ಮೊದಲಾದವರಿದ್ದರು.

vhttps://www.vijayavani.net/mangalore-sez-and-mri-group-mou-mp-brijesh-chowta

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net