ಸುಳ್ಯ: ಐವರ್ನಾಡು ಗ್ರಾಮದ ಬಾಂಜಿಕೋಡಿ ಚೆಮ್ನೂರು ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿಯ ಗುದ್ದಲಿ ಪೂಜೆ ಶನಿವಾರ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಎಸ್.ಎನ್.ಮನ್ಮಥ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಕುತ್ತ್ಯಾಡಿ, ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ ಸಮ್ಮುಖದಲ್ಲಿ ಶಿವಪ್ಪಗೌಡ ನೆಕ್ಕರೆಕಜೆ ಕಾಮಗಾರಿಗೆ ಚಾಲನೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯ ರಂಜನ್ ಮೂಲೆತೋಟ, ಐವರ್ನಾಡು ಪ್ರಾ.ಕೃ.ಪ. ಸಂಘದ ನಿರ್ದೇಶಕರಾದ ದೇವಕಿ ಚೆಮ್ನೂರು, ಕೃಷ್ಣಪ್ಪ ಗೌಡ ಚೆಮ್ನೂರು, ವಸಂತ ಭಟ್ ನಾಟಿಕೇರಿ, ಗೋಪಾಲಕೃಷ್ಣ ಚೆಮ್ನೂರು, ಜಯಪ್ರಸಾದ್ ಭಟ್ ನಾಟಿಕೇರಿ, ಅನಂತಕುಮಾರ್ ಖಂಡಿಗೆಮೂಲೆ, ಪ್ರಭಾಕರ್ ಕುತ್ಯಾಡಿ, ರೋಹಿತ್ ಬಾಂಜಿಕೋಡಿ, ರವಿಂದ್ರ ಬಾಂಜಿಕೋಡಿ, ಸುದೇಶ್ ಚೆಮ್ನೂರು, ರಂಜಿತ್ ಮೂಲೆತೋಟ, ಪ್ರಸಾದ್ ಕೆಮ್ಮಿಂಜೆ, ಜಯಶ್ರೀ ಮಡ್ತಿಲ, ರಶ್ಮಿತಾ ಬಾಂಜಿಕೋಡಿ, ಅಂಬ್ರೋಸ್ ಮಚಾದೋ, ಶ್ರೀನಿವಾಸ್ ಭಟ್ ನಾಟಿಕೇರಿ, ದಯಾನಂದ್ ಚೆಮ್ನೂರು, ಗುತ್ತಿಗೆದಾರ ಸೌರವ್ ಹಾಗೂ ಊರವರು ಉಪಸ್ಥಿತರಿದ್ದರು.