ಗುಡ್ಡದ ಗವಿಸಿದ್ಧೇಶ್ವರ ಜಾತ್ರೆ ಇಂದು

17 LXR-1
Published on

ಲಕ್ಷ್ಮೇಶ್ವರ: ತಾಲೂಕಿನ ಆದರಹಳ್ಳಿ ಗ್ರಾಮದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಮಾ.18ರಿಂದ 20ರವರೆಗೆ ವಿಜೃಂಭಣೆಯಿಂದ ಜರುಗಲಿದೆ. 18ರಂದು 3ಗಂಟೆಗೆ ರೊಟ್ಟಿ ಜಾತ್ರೆ, ನಂತರ ಸಹಸ್ರ ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ, ರಾತ್ರಿ ಧಾರ್ಮಿಕ ಸಭೆ, ಪೂಜ್ಯರ ಆಶೀರ್ವಚನ, 19ರಂದು ಮಧ್ಯಾಹ್ನ 12ಗಂಟೆಗೆ ಮೌನತಪಸ್ವಿ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮೀಜಿಗಳ ಪಲ್ಲಕ್ಕಿ ಉತ್ಸವ, ಸಂಜೆ 5ಗಂಟೆಗೆ ಮಹಾರಥೋತ್ಸವ, 7 ಗಂಟೆಗೆ ಧರ್ಮಸಭೆ ಆಯೋಜಿಸಲಾಗಿದೆ. 20ರಂದು ಸಂಜೆ 5ಗಂಟೆಗ ಕಡುಬಿನ ಕಾಳಗ ಜರುಗಲಿದೆ ಎಂದು ಮಹಾನ್ ತಪಸ್ವಿ ಕುಮಾರ ಮಹಾರಾಜರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net