

ವಿಜಯವಾಣಿ ಸುದ್ದಿಜಾಲ ಸುಳ್ಯ
ಸುಳ್ಯ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದರು. ಎಲಿಮಲೆ- ಅರಂತೋಡು ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆಯಾದ 1.25 ಕೋಟಿ ರೂ. ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು.
ಸುಳ್ಯ ನಪಂ ವ್ಯಾಪ್ತಿಯ ಕೊಡಿಯಾಲಬೈಲು, ನೀರಬಿದಿರೆ, ದುಗಲಡ್ಕ ರಸ್ತೆ 45 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಲಿದ್ದು, ಇದರ ಗುದ್ದಲಿಪೂಜೆ ನೆರವೇರಿಸಲಾಯಿತು. ಪಂಜ ಗ್ರಾಪಂ ವ್ಯಾಪ್ತಿಯಲ್ಲಿ 50 ಲಕ್ಷ ರೂ. ವೆಚ್ಚದ ಪಂಜ-ಬಳ್ಳಕ್ಕ ರಸ್ತೆಗೆ ಗುದ್ದಲಿಪೂಜೆ, 16.1 ಲಕ್ಷದ ಗ್ರಾಮೀಣ ರಸ್ತೆ ಉದ್ಘಾಟನೆ ನಡೆಸಲಾಯಿತು. ಸುಬ್ರಹ್ಮಣ್ಯ ಸಂಪರ್ಕಿಸುವ ರಾಜ್ಯ ಹೆದ್ದಾರಿ ಪಂಜ-ಮಂಜೇಶ್ವರ ರಸ್ತೆಯ 75 ಲಕ್ಷ ರೂ. ವೆಚ್ಚದ ಮರು ಡಾಂಬರೀಕರಣಕ್ಕೆ ಶಾಸಕರು ಗುದ್ದಲಿ ಪೂಜೆ ನೆರವೆರಿಸಿದರು. ಗುತ್ತಿಗಾರು-ಕಮಿಲ ರಸ್ತೆಯ ಚತ್ರಪ್ಪಾಡಿ ಎಂಬಲ್ಲಿ ನೂತನ ಸೇತುವೆ, ಪೈಕ-ಬಾಕಿಲ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಮುಖರಾದ ವೆಂಕಟ್ ದಂಬೆಕೊಡಿ, ಮುಳಿಯ ಕೇಶವ ಭಟ್, ಕೃಷ್ಣಯ್ಯ ಮೂಲೆತೋಟ, ಬೆಳ್ಯಪ್ಪ ಗೌಡ ಕಡ್ತಲ್‌ಕಜೆ, ವಿನಯ ಕುಮಾರ್ ಮುಳುಗಾಡು, ದಿವಾಕರ ಮುಂಡೋಡಿ, ಸುಳ್ಯ ನಪಂ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷ ಬುದ್ದನಾಯ್ಕ, ಸದಸ್ಯರಾದ ಕಿಶೋರಿ ಶೇಟ್, ಬಾಲಕೃಷ್ಣ ರೈ, ನಪಂ ಮುಖ್ಯಾಧಿಕಾರಿ ಸುಧಾಕರ್, ಎ.ಟಿ.ಕುಸುಮಾಧರ, ನಾರಾಯಣ ಎಸ್.ಎಂ., ಡಾ.ರಾಮಯ್ಯ ಭಟ್ ಪಂಜ, ಪಂಜ ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಕಲ್ಕ, ಉಪಾಧ್ಯಕ್ಷ ನಾರಾಯಣ ಕೃಷ್ಣನಗರ, ಮಾಜಿ ತಾಪಂ ಅಧ್ಯಕ್ಷೆ ಸುವರ್ಣಿಣಿ, ಬಳ್ಪ ಗ್ರಾಪಂ ಅಧ್ಯಕ್ಷ ಹರ್ಷಿತ್ ಕಾರ್ಜ, ಗುತ್ತಿಗಾರು ಗ್ರಾಪಂ ಅಧ್ಯಕ್ಷೆ ಸುಮಿತ್ರ ಮೂಕಮಲೆ ಮತ್ತಿತರರು ಉಪಸ್ಥಿತರಿದ್ದರು.