ಗುಡದೂರು ಗ್ರಾಪಂಗೆ ಮಲ್ಲಯ್ಯ ಪಿಡಿಒ ಬೇಡ

28-msk-1
ಮಸ್ಕಿ ತಾಪಂ ಎಡಿ ಶಿವಾನಂದರಡ್ಡಿಗೆ ಗುಡದೂರು ಗ್ರಾಪಂ ಸದಸ್ಯರು ಮನವಿ ಸಲ್ಲಿಸಿದರು. ಗ್ರಾಪಂ ಅಧ್ಯಕ್ಷೆ ಮಾರೆಮ್ಮ ಕಂಬಗಲ್, ಗ್ರಾಪಂ ಸದಸ್ಯರಾದ ನರಸಪ್ಪ ಹೆಡಗಿಬಾಳಕ್ಯಾಂಪ್, ಮಲ್ಲಪ್ಪ ಗೋನಾಳ, ಶಿವರಾಜ ಹಸಮಕಲ್, ನಾಗರಾಜ ಇತರರಿದ್ದರು.
Published on

ಮಸ್ಕಿ: ತಾಲೂಕಿನ ಗುಡದೂರು ಗ್ರಾಪಂಗೆ ಮಲ್ಲಯ್ಯ ಪಿಡಿಒ ಆಗಿ ನೇಮಿಸದಿರಲು ಒತ್ತಾಯಿಸಿ ಪಟ್ಟಣದ ತಾಪಂ ಎಡಿ ಶಿವಾನಂದರಡ್ಡಿಗೆ ಗ್ರಾಪಂ ಸದಸ್ಯರು ಬುಧವಾರ ಮನವಿ ಸಲ್ಲಿಸಿದರು.

ಹಿಂದಿನ ಪಿಡಿಒ ಆಗಿ ಲಕ್ಷ್ಮೀಕಾಂತ ಮೆದಕಿನಾಳ ಅವರು ಮೇ 31ಕ್ಕೆ ನಿವೃತ್ತಿಯಾಗುತ್ತಿದ್ದಾರೆ. ಅವರ ಸ್ಥಾನಕ್ಕೆ ಮಲ್ಲಯ್ಯ ಅವರನ್ನು ನೇಮಿಸಲಾಗುತ್ತಿದೆ. ಹಿಂದೆ ಗುಡದೂರು ಗ್ರಾಪಂಗೆ ಪಿಡಿಒ ಆಗಿದ್ದ ಮಲ್ಲಯ್ಯ ಅವರು ಗ್ರಾಪಂ ಸದಸ್ಯರ ಹೇಳಿದ ಕೆಲಸಗಳನ್ನು ಮಾಡುತ್ತಿರಲಿಲ್ಲ.

ತಹ ಅಧಿಕಾರಿಯನ್ನು ಗ್ರಾಪಂಗೆ ನೇಮಿಸದಿರಿ. ರಾಜಕೀಯ ನಾಯಕರ ಒತ್ತಡದಿಂದ ಮಲ್ಲಯ್ಯ ಅವರನ್ನು ನೇಮಿಸಿದರೆ ಎಲ್ಲ ಸದಸ್ಯರು ಗ್ರಾಪಂಗೆ ಬಹಿಷ್ಕಾರ ಹಾಕಲಾಗುವುದು ಎಂದು ಗ್ರಾಪಂ ಅಧ್ಯಕ್ಷೆ ಮಾರೆಮ್ಮ ಕಂಬಗಲ್ ಎಚ್ಚರಿಸಿದರು. ಗ್ರಾಪಂ ಸದಸ್ಯರಾದ ನರಸಪ್ಪ ಹೆಡಗಿಬಾಳಕ್ಯಾಂಪ್, ಮಲ್ಲಪ್ಪ ಗೋನಾಳ, ಶಿವರಾಜ ಹಸಮಕಲ್, ನಾಗರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net