ಗುಡದನಾಳದಲ್ಲಿ ತಾಯಿ-ಮಗಳು ಆತ್ಮಹತ್ಯೆ

Sucide
Published on

ಲಿಂಗಸುಗೂರು: ಗುಡದನಾಳದಲ್ಲಿ ತಾಯಿ-ಮಗಳು ಸೋಮವಾರ ಬೆಳಗಿನಜಾವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ಲಕ್ಷ್ಮೀ ಚಂದ್ರಶೇಖರಗೌಡ ಪೊಲೀಸ್ ಪಾಟೀಲ್ (46) ಮತ್ತು ಅಂಬಿಕಾ (11) ಮೃತರು.

ಭಾನುವಾರ ರಾತ್ರಿ ಎಂದಿನಂತೆ ಮನೆಯಲ್ಲಿ ತಾಯಿ-ಮಗಳು, ಮನೆ ಹೊರಗಡೆ ಲಕ್ಷ್ಮೀ ಅವರ ಮಗ-ಹೆಂಡತಿ ಮಲಗಿದ್ದರು. ಬೆಳಗ್ಗೆ ಬಾಗಿಲು ತಟ್ಟಿದರೂ ಏಳಲಿಲ್ಲವೆಂಬ ಕಾರಣಕ್ಕೆ ಲಕ್ಷ್ಮೀ ಅವರ ಮಗ ಪಂಪನಗೌಡ ಪೊಲೀಸ್ ಪಾಟೀಲ್ ಬಾಗಿಲು ಮುರಿದು ನೋಡಿದಾಗ ತಾಯಿ-ಮಗಳು ನೇಣಿಗೆ ಶರಣಾದ ದೃಶ್ಯ ಕಂಡು ಬಂತು.

ನನ್ನ ತಾಯಿಗೆ ಮೈ-ಕೈ ನೋವು ಆಗಿದ್ದರಿಂದ ಚಿಕಿತ್ಸೆ ಕೊಡಿಸಲಾಗಿತ್ತು. ಎರಡು ತಿಂಗಳ ಮಾತ್ರೆ ಪ್ರತಿದಿನ ಸೇವಿಸಲು ಹೇಳಿದ್ದರಿಂದ ಅಂದಿನಿಂದ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದು, ಒಬ್ಬರೇ ಮಾತನಾಡುತ್ತಿದ್ದರು. ಹೀಗಾಗಿ ಜೂ.8 ರಂದು ಹುಬ್ಬಳ್ಳಿಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ನನ್ನ ತಾಯಿ- ತಂಗಿ ಅನ್ಯೋನ್ಯವಾಗಿದ್ದರು.

ನಾನು ಸತ್ತರೆ ನಿನಗಾರೂ ಇಲ್ಲವೆಂದು ತಾಯಿ ಆಗಾಗ ನನ್ನ ತಂಗಿಗೆ ಹೇಳುತ್ತಿದ್ದರು. ಸೋಮವಾರ ಬೆಳಗಿನಜಾವ ನೇಣಿಗೆ ಶರಣಾಗಿರಬಹುದೆಂದು ಮೃತಳ ಮಗ ಲಿಂಗಸುಗೂರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net