

ಗಂಗಾವತಿ: ಕುಟುಂಬ ನಿರ್ವಹಣೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿದ್ದು, ಬಡ ಕುಟುಂಬಗಳಿಗೆ ವರದಾನವಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಡಾ.ಕೆ.ವೆಂಕಟೇಶಬಾಬು ಹೇಳಿದರು.
ಇದನ್ನೂ ಓದಿ:ಸ್ವಾವಲಂಬನೆಗಾಗಿ ಗ್ಯಾರಂಟಿಗಳು ಜಾರಿ
ತಾಲೂಕಿನ ಬಸವನದುರ್ಗಾ ಡುಮ್ಕಿಕೊಳ ಕೆರೆ ಬಳಿ ಜಿಪಂ ಮತ್ತು ತಾಪಂನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ನಡೆ ಗ್ರಾಪಂ ಕಡೆ ಅಭಿಯಾನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಲೆ ಏರಿಕೆ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳು ಕೈಹಿಡಿದು ಗ್ರಾಮೀಣರು ಗುಳೇ ಹೋಗುವುದನ್ನು ತಪ್ಪಿಸಿವೆ. ಗಹಲಕ್ಷ್ಮಿ, ಯುವನಿಧಿ, ಗಹಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಗಳಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲವಾಗಿದೆ. ಯೋಜನೆಗಳು ಮಧ್ಯವರ್ತಿಗಳಿಲ್ಲದೇ ನೇರ ಲಾನುಭವಿಗಳಿಗೆ ತಲುಪುತ್ತಿದ್ದು, ಮಕ್ಕಳ ಶಿಕ್ಷಣಕ್ಕೆ ನೆರವಾಗಿದೆ. ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳು ಮತ್ತು ಕೂಲಿಕಾರರ ಸಂಚಾರಕ್ಕೆ ಅನುಕೂಲವಾಗಿದೆ ಎಂದರು. ಯೋಜನೆ ಹಣ ಬಳಕೆ ಕುರಿತು ಲಾನುಭವಿಗಳು ಅಭಿಪ್ರಾಯ ಹಂಚಿಕೊಂಡರು. ವಿವಿಧ ಸಮಸ್ಯೆಗಳನ್ನು ಅಧಿಕಾರಿಗಳ ಮೂಲಕ ಸ್ಥಳದಲ್ಲಿ ಇತ್ಯರ್ಥಪಡಿಸಲಾಯಿತು.
ಸಮಿತಿ ಜಿಲ್ಲಾಧ್ಯಕ್ಷ ಎಸ್.ಬಿ.ಖಾದ್ರಿ, ಸದಸ್ಯ ಆನಂದ ಹಾಸಲ್ಕರ್, ತಾಲೂಕು ಸಮಿತಿ ಸದಸ್ಯರಾದ ಅಹ್ಮದ್ ಪಟೇಲ್, ನಾಗಮ್ಮ, ಓಂಕಾರಪ್ಪ, ರಾಜಪ್ಪ, ಮುಸ್ತಾಕ್, ತಾಪಂ ಇಒ ರಾಮರೆಡ್ಡಿ ಪಾಟೀಲ್, ಆನೆಗೊಂದಿ ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ, ಚಿಕ್ಕಜಂತಗಲ್ ಗ್ರಾಪಂ ಉಪಾಧ್ಯಕ್ಷ ನಾಗಪ್ಪ ಬಲಕುಂದಿ, ಪಿಡಿಒಗಳಾದ ಮಲ್ಲಿಕಾರ್ಜುನ ಕಡಿವಾಳ, ರವೀಂದ್ರ ಕುಲ್ಕರ್ಣಿ, ಅಂಗನವಾಡಿ ಮೇಲ್ವಿಚಾರಕಿ ಈರಮ್ಮ, ನರೇಗಾ ಟಿಎಇ ಶರಣಯ್ಯಸ್ವಾಮಿ ಇತರರಿದ್ದರು.