ಗ್ಯಾರಂಟಿಗಳು ಅಭಿವೃದ್ಧಿಗೆ ತೊಡಕು

7Snk1
Published on

ಸಂಕೇಶ್ವರ: ಮೂಲಸೌಕರ್ಯಗಳಿಗೆ ಒತ್ತು ನೀಡಬೇಕಿರುವ ಸರ್ಕಾರ ಜನಸಾಮಾನ್ಯರಿಗೆ ಉಚಿತ ಯೋಜನೆ ಆಸೆ ತೋರಿಸಿ ಅಭಿವೃದ್ಧಿ ಯೋಜನೆಗಳಿಗೆ ಕತ್ತರಿ ಹಾಕುತ್ತಿದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಆರೋಪಿಸಿದರು.

ಸಮೀಪದ ಕಮತನೂರ ಗೇಟ್ ಬಳಿ ಜಲ ಜೀವನ ಮಿಷನ್ ಯೋಜನೆಯಡಿ ಹಿಡಕಲ್ ಡ್ಯಾಮ್‌ನಿಂದ ನಿಡಸೋಸಿ ಗ್ರಾಮದ ನೀರು ಪೂರೈಕೆ ಯೋಜನೆ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಜನರ ತೆರಿಗೆ ಹಣ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಬಳಸಿಕೊಂಡರೆ ಲಪ್ರದ. ಆದರೆ, ಗ್ಯಾರಂಟಿಗಳಿಂದ ಕೃಷಿ, ಶಿಕ್ಷಣ, ನೀರಾವರಿ ಹಾಗೂ ಕೈಗಾರಿಕಾ ಅಭಿವೃದ್ಧಿ ಕುಂಠಿತವಾಗಿದೆ. ಇದರಿಂದ ಮೂಲಸೌಕರ್ಯಗಳಿಲ್ಲದೆ ಗ್ರಾಮೀಣ ಜನರು ಪರಿತಪಿಸುತ್ತಿದ್ದಾರೆ ಎಂದರು.

ಹಿರಿಯ ಧುರೀಣರಾದ ದುಂಡಪ್ಪ ಹೆದ್ದೂರಿ, ಕಲ್ಲಣ್ಣ ಚೌಗಲಾ, ಭೀಮಗೌಡ ಗಿರಿಗೌಡನವರ, ಕೆಂಪಣ್ಣ ದೇಸಾಯಿ, ಸಂಗಮ ಶುಗರ್ಸ್ ನಿರ್ದೇಶಕ ಸುಭಾಷ ಪಾಟೀಲ, ಪ್ರಶಾಂತ ಪಾಟೀಲ, ರಾಜಶ್ರೀ ಗೋಟಿ, ಉಮೇಶ ಪಾಟೀಲ, ಶಿವಲಿಂಗ ಪುಟ್ಟಿ, ಸುರೇಶ ಬೋರಗಲ್ಲಿ, ವಿರೂಪಾಕ್ಷಿ ಚೌಗಲಾ, ಗಜಾನನ ಬಾಡ, ಶ್ರೀಧರ ಕುಲಕರ್ಣಿ, ಮಲ್ಲಪ್ಪ ಅಂಕಲೆ, ಪಿಡಿಒ ಶೋಭಾ ಬಡಕುಂದ್ರಿ, ಅಭಿಯಂತ ಸಂತೋಷ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net