

ಹೊಸಕೋಟೆ: ರಾಜ್ಯದಲ್ಲಿ ಕಾಂಗ್ರೆಸ್ ಘೋಷಿಸಿದ ಪಂಚ ಗ್ಯಾರಂಟಿ ಯೋಜನೆಯಡಿ ತಾಲೂಕಿಗೆ ಸುಮಾರು 500 ಕೋಟಿ ರೂ.ವರೆಗೆ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲೂಕು ಪಂಚಾಯಿತಿಯಲ್ಲಿ ಮಂಗಳವಾರ ಆಯೋಜಿಸಿದ್ದ ಗ್ಯಾರಂಟಿ ಸಮಿತಿ ಹಾಗೂ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಶಕ್ತಿ ಯೋಜನೆಯಡಿ ಬಿಎಂಟಿಸಿ 39 ಟಕ ಒಂದರಲ್ಲಿ 3 ಕೋಟಿ 27 ಸಾವಿರದಷ್ಟು ಟ್ರಿಪ್ಗಳಲ್ಲಿ ಮಹಿಳೆಯರು ಪ್ರಯಾಣಿಸಿದ್ದು, ಒಟ್ಟು ಮೊತ್ತ 49.38 ಕೋಟಿ ರೂ.ಗಳಾಗಿದೆ, ಪ್ರತಿ ತಿಂಗಳು 15 ಲಕ್ಷ ವೆಚ್ಚವಾಗುತ್ತಿದೆ ಎಂದರು. ಗೃಹ ಲಕ್ಷಿ$್ಮ ಯೋಜನೆಯಡಿ ತಾಲೂಕಿನ 60,025 ಫಲಾನುಭವಿಗಳಿದ್ದಾರೆ. ಅದರಲ್ಲಿ ಶೇ.99.93 ಮಹಿಳೆಯರು ಸಾಧನೆ ಮಾಡಿದ್ದು, ಇದರಲ್ಲಿ ಈ ವರೆಗೆ 205 ಕೋಟಿ ಮೊತ್ತ ನೀಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ 99,295 ಮನೆಗಳಿಗೆ ಈ ಪ್ರಯೋಜನೆ ನೀಡಿದ್ದು, ಶೇ.99.55 ಸಾಧನೆ ಮಾಡಿ 4.5 ಕೋಟಿ ಮೊತ್ತದ ಯೋಜನೆಯಾಗಿದೆ.
ಅನ್ನಬಾಗ್ಯ ಯೋಜನೆಯಡಿ 3.5 ಕೋಟಿ ವೆಚ್ಚ ಮಾಡಿ 61 ಸಾವಿರ ಫಲಾನುಭವಿಗಳಿಗೆ ಸಹಕಾರ ನೀಡಿದೆ ಹಾಗೂ ವಿದ್ಯಾನಿಧಿ ಯೋಜನೆಯಡಿ ಈ ವರೆಗೆ 574 ವಿದ್ಯಾರ್ಥಿಗಳಿಗೆ ಮಾಸಿಕ ವೇತನದಡಿ 83.5 ಲಕ್ಷ ಹಣ ನೀಡಲಾಗಿದೆ. ಇದರಿಂದ ಬಡವರು ಯೋಜನೆಯ ಫಲದಿಂದ ನಿರಾಳರಾಗಿದ್ದಾರೆ ಎಂದರು. ದೊಡ್ಮನೆ ಅರುಣ್ ಕುಮಾರ್, ಯರ್ರೇಗೌಡ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.