ಗ್ಯಾರಂಟಿ ಯಶಸ್ಸು ವಿಪಕ್ಷಕ್ಕೆ ಹೊಟ್ಟೆಯುರಿ

Guaranteed success is a burden for the opposition.
ಬನಹಟ್ಟಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಯಡಿ 500 ಕೋಟಿ ಉಚಿತ ಪ್ರಯಾಣಗಳ ಯಶಸ್ಸನ್ನು ಆಚರಿಸಿದ ಕಾಂಗ್ರೆಸ್ ಕಾರ್ಯಕರ್ತರು. ಬಲವಂತಗೌಡ ಪಾಟೀಲ, ಜಯಶ್ರೀ ತಿಮ್ಮಾಪುರ, ರೇಣುಕಾ ಮಡ್ಡಿಮನಿ ಇದ್ದರು.
Published on

ರಬಕವಿ-ಬನಹಟ್ಟಿ : ಕಳೆದ ಎರಡೂವರೆ ವರ್ಷಗಳಿಂದ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಿ ಅಸಾಧ್ಯವಾಗಿದ್ದನ್ನು ಸಾಧ್ಯಗೊಳಿಸಿ ಗ್ಯಾರಂಟಿ ಯೋಜನೆಗಳನ್ನು ಅವ್ಯಾಹತವಾಗಿ ಬಡವರಿಗೆ ಮುಟ್ಟಿಸಿದ ಕಾಂಗ್ರೆಸ್ ಸರ್ಕಾರದ ಯಶಸ್ಸು ವಿಪಕ್ಷಗಳ ನಿದ್ದೆಗೆಡಿಸಿದೆ. ಅಲ್ಲದೆ ಅವರ ಹೊಟ್ಟೆಯುರಿಗೂ ಕಾರಣವಾಗಿದೆ ಎಂದು ಜಿಲ್ಲಾ ಪಂಚಭಾಗ್ಯ ಅನುಷ್ಠಾನ ಸಮಿತಿ ಅಧ್ಯಕ್ಷ ಬಲವಂತಗೌಡ ಪಾಟೀಲ ಹೇಳಿದರು.

ಶಕ್ತಿ ಯೋಜನೆಯಡಿ 500 ಕೋಟಿ ಉಚಿತ ಪ್ರಯಾಣ ಹಿನ್ನೆಲೆಯಲ್ಲಿ ಬನಹಟ್ಟಿ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಾಖಲೆಯ ಸಂಖ್ಯೆಯಲ್ಲಿ ಬಜೆಟ್ ಮಂಡಿಸುವ ಮೂಲಕ ಆರ್ಥಿಕ ಸಂಪನ್ಮೂಲ ಹೆಚ್ಚಿಸುವಲ್ಲಿ ನಿಷ್ಣಾತರಾದ ಸಿಎಂ ಸಿದ್ದರಾಮಯ್ಯ ಸಾಮರ್ಥ್ಯ ತಿಳಿಯದೆ ವಿಪಕ್ಷಗಳು ಪಂಚಭಾಗ್ಯಗಳ ಅನುಷ್ಠಾನ ಸಾಧ್ಯವೇ ಇಲ್ಲ ಎಂದು ಬೊಬ್ಬೆ ಹಾಕಿದ್ದವು. ಇದೀಗ ಅದರ ಯಶಸ್ಸಿನಿಂದ ಮುಂದಿನ ಚುನಾವಣೆಯಲ್ಲೂ ಗೆಲುವು ಅಸಾಧ್ಯವೆಂದರಿತು, ಅಭಿವೃದ್ಧಿ ಆಗುತ್ತಿಲ್ಲವೆಂದು ಅಪಪ್ರಚಾರ ಮಾಡುತ್ತ ರಾಜ್ಯದ ಜನರೆದುರು ಅಪಹಾಸ್ಯಕ್ಕೀಡಾಗುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಶಾಸಕರಿಗೆ ಕ್ಷೇತ್ರವಾರು ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವ ಮೂಲಕ ಸಿದ್ದರಾಮಯ್ಯ ಅಭಿವೃದ್ಧಿಗೂ ಒತ್ತು ನೀಡಿದ್ದಾರೆ. ಬಡವರ್ಗದ ಆರ್ಥಿಕ ಪ್ರಗತಿಗೆ ಕಾರಣವಾದ ಪಂಚಭಾಗ್ಯಗಳ ಯಶಸ್ಸು ವಿಪಕ್ಷಗಳ ನಿದ್ದೆಗೆಡಿಸಿದೆ. ಸುಳ್ಳು ಆರೋಪ ಮಾಡದೆ ಸರ್ಕಾರದ ಬದ್ಧತೆಯ ಬಗ್ಗೆ ವಿಪಕ್ಷಗಳು ತಿಳಿಬೇಕು ಎಂದರು.

ತಾಲೂಕು ಸಮಿತಿ ಅಧ್ಯಕ್ಷೆ ಜಯಶ್ರೀ ತಿಮ್ಮಾಪುರ, ಮಹಿಳಾ ಘಟಕ ಅಧ್ಯಕ್ಷೆ ರೇಣುಕಾ ಮಡ್ಡಿಮನಿ, ಸೀತಾ ವಗ್ಗರ, ಶಂಕರ ಕೆಸರಗೊಪ್ಪ,  ಇರ್ಷಾದ್ ಮೋಮಿನ್, ನಂದಿಕೇಶ್ವರ ಮಠದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net