ಬದುಕಿಗೆ ಆಸರೆಯಾದ ಗ್ಯಾರಂಟಿ

27dvk 8
Published on

ಬೈಲಹೊಂಗಲ: ಕಾಂಗ್ರೆಸ್​ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಬದುಕಿಗೆ ಆಸರೆಯಾಗಿದ್ದು, ರಾಜ್ಯದ ತಲಾದಾಯವನ್ನು ದೇಶದಲ್ಲೇ ನಂಬರ್​ ಒನ್​ ಸ್ಥಾನಕ್ಕೆ ಕೊಂಡೊಯ್ದಿವೆ. ಇದು ನಮ್ಮ ಸರ್ಕಾರದ ಬದ್ಧತೆಗೆ ಸಾಯಾಗಿದೆ ಎಂದು ಕೆಪಿಸಿಸಿ ಯುವ ಕಾಂಗ್ರೆಸ್​ ಅಧ್ಯಕ್ಷ ಎಚ್​.ಎಸ್​. ಮಂಜುನಾಥ ಗೌಡ ಹೇಳಿದರು.

ಪಟ್ಟಣದ ಬಿ.ಬಿ. ಗಣಾಚಾರಿ ಕಲ್ಯಾಣ ಮಂಟಪದಲ್ಲಿ ನಡೆದ ಯುವ ಕಾಂಗ್ರೆಸ್​ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ನಾವು ಗ್ಯಾರಂಟಿಗಳನ್ನು ೂಷಿಸಿದಾಗ ಬಿಜೆಪಿ, ಜೆಡಿಎಸ್​ನವರು ಇದು ಅಸಾಧ್ಯ. ರಾಜ್ಯ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದರು. ಆದರೆ ಇಂದು ಅದೇ ಗ್ಯಾರಂಟಿಗಳಿಂದ ರಾಜ್ಯದ ತಲಾದಾಯ ಏರಿಕೆ ಕಂಡಿದೆ. ವಿಶ್ವಸಂಸ್ಥೆಯ ಅಧ್ಯಕ್ಷರು ಮತ್ತು ಜಾಗತಿಕ ಆರ್ಥಿಕ ತರೇ ನಮ್ಮ ಯೋಜನೆಗಳನ್ನು ಕೊಂಡಾಡಿದ್ದಾರೆ ಎಂದರು.

ನಮ್ಮನ್ನು ಟೀಕಿಸುವ ಬಿಜೆಪಿಯೇ ಇಂದು ತನ್ನ ಆಡಳಿತವಿರುವ ರಾಜ್ಯಗಳಲ್ಲಿ ನಮ್ಮ ಗ್ಯಾರಂಟಿಗಳನ್ನು ಅನುಕರಿಸುತ್ತಿದೆ. ಬಿಹಾರದಲ್ಲಿ 125 ಯೂನಿಟ್​ ಉಚಿತ ವಿದ್ಯುತ್​ ೂಷಿಸಿರುವುದೇ ಇದಕ್ಕೆ ಸಾ. ಕೇಂದ್ರ ಸರ್ಕಾರವು ಬೆಲೆ ಏರಿಕೆ ಮತ್ತು ಅನುದಾನದಲ್ಲಿ ತಾರತಮ್ಯ ಮಾಡುವ ಮೂಲಕ ರಾಜ್ಯಕ್ಕೆ ನಿರಂತರ ಅನ್ಯಾಯ ಮಾಡುತ್ತಿದ್ದು, ಇದರ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕಿದೆ ಎಂದು ಹೇಳಿದರು.

ಸಚಿವರಾದ ಸತೀಶ ಜಾರಕಿಹೊಳಿ, ಲ್ಮ ಹೆಬ್ಬಾಳ್ಕರ್​, ಬೆಳಗಾವಿ ನಗರ ಜಿಲ್ಲಾ ಯುವ ಕಾಂಗ್ರೆಸ್​ ಅಧ್ಯಕ್ಷ ಸಾಗರ ಗೋ ದೀವಟಿಗೆ, ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ವಿನಯ ನಾವಲಗಟ್ಟಿ, ರಾಜ್ಯ ಯುವ ಕಾಂಗ್ರೆಸ್​ ಉಪಾಧ್ಯಕ್ಷ ಅಬ್ದುಲ್​ ದೇಸಾಯಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್​ ಜಾರಕಿಹೊಳಿ, ಕಾಂಗ್ರೆಸ್​ ಮುಖಂಡ ಮೃಣಾಲ್​ ಹೆಬ್ಬಾಳ್ಕರ್​, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net