ಗುತ್ತಲ ಆರೋಗ್ಯ ಕೇಂದ್ರಕ್ಕೆ ಅಗತ್ಯ ಸೌಲಭ್ಯ ಭರವಸೆ: 6 ಹಾಸಿಗೆಗಳ ವಾರ್ಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆ

HOSPITAL BHUMI PUJE
Published on

ಗುತ್ತಲ: ಆರೋಗ್ಯ ಸಂಪತ್ತು ಮನುಷ್ಯನಿಗೆ ಅತಿ ಮುಖ್ಯ. ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಕಾಳಜಿ ಹೆಚ್ಚಾಗಿದ್ದು, ಸರ್ಕಾರ ಬಡವರಿಗೆ ಆರೋಗ್ಯ ಸೇವೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸುತ್ತಿದೆ ಎಂದು ವಿಧಾನ ಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.

ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ 6 ಹಾಸಿಗೆಗಳ ವಾರ್ಡ್ ನಿರ್ವಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಗುತ್ತಲ ಪಟ್ಟಣದಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ. ರೋಗಿಗಳ ಆರೈಕೆಗೆ ಹೆಚ್ಚಿನ ಬೆಡ್​ಗಳ ಅವಶ್ಯಕತೆ ಇದೆ. ಕಾರಣ ಒಂದು ವಾರ್ಡ್​ನ ನಿರ್ಮಾಣ ಅವಶ್ಯಕವಾಗಿದೆ. ಮುಂದಿನ ದಿನಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೇಕಾಗಿರುವ ಅಗತ್ಯ ಸೌಲಭ್ಯಗಳನ್ನು ಆದ್ಯತೆ ಮೇರೆಗೆ ಒದಗಿಸಿಕೊಡಲಾಗುವುದು ಎಂದರು.

ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಅಭಿನಂದನಕುಮಾರ ಸಾಹುಕಾರ ಮಾತನಾಡಿ, ಕರೊನಾ ಸಮಯದಲ್ಲಿ ಆಕ್ಸಿಜನ್ ಸಮಸ್ಯೆ ಇತ್ತು. ಆದರೆ, ಈಗ ಅದರ ಸಮಸ್ಯೆ ಇಲ್ಲ. ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳು ಹಾಗೂ ಇತರೆ ಜನರು ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ವಚ್ಛತೆಗೆ ಸಹಕರಿಸಬೇಕು. ಎಲ್ಲೆಂದರೆ ಉಗಳಿದರೆ ದಂಡ ವಿಧಿಸಲಾಗುವುದು. ಪ್ರತಿಯೊಬ್ಬರೂ ವೈದ್ಯರ ಸಲಹೆ ಮೇರೆಗೆ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಗುತ್ತಲದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೆಲವು ಕೊರತೆಗಳಿದ್ದು, ಅವುಗಳನ್ನು ಶಾಸಕರು ಪರಿಹರಿಸಬೇಕು ಎಂದು ಮನವಿ ಮಾಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಪಿ.ಎಸ್. ಕುಂದೂರ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಮೈದೂರ, ಜಿಲ್ಲಾ ಹಿರಿಯ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಜಿಪಂ ಮಾಜಿ ಸದಸ್ಯ ಸಿ.ಬಿ. ಕುರುವತ್ತಿಗೌಡ್ರ, ಪಪಂ ಮಾಜಿ ಉಪಾಧ್ಯಕ್ಷ ನಾಗರಾಜ ಎರಿಮನಿ, ಆಶ್ರಯ ಕಮಿಟಿ ಮಾಜಿ ಅಧ್ಯಕ್ಷ ಶಹಜಾನಸಾಬ ಅಗಡಿ, ರುದ್ರಪ್ಪ ಹಾದಿಮನಿ, ಪಪಂ ಸದಸ್ಯರಾದ ಪ್ರದೀಪ ಸಾಲಗೇರಿ, ಬಸಣ್ಣ ನೆಗಳೂರ, ಮಹ್ಮದ್​ಹನೀಫ್ ರಿತ್ತಿ, ಅಜಯ ಬಂಡಿವಡ್ಡರ, ಖಲೀಲಅಹ್ಮದ ಖಾಜಿ, ಗುಡ್ಡಪ್ಪ ಗೊರವರ, ಮಂಜುನಾಥ ದಪ್ಪೇರ, ವಿನೋದ ಗುತ್ತಲ, ವಿಜಯ ಚಲವಾದಿ, ಹನುಮಂತ ಅಗಸಿಬಾಗಿಲದ, ಗ್ರಾಪಂ ಮಾಜಿ ಸದಸ್ಯರಾದ ಶಂಕ್ರಪ್ಪ ಗೌಳಿ, ಹನುಮಂತಪ್ಪ ಬಾಣಿ, ಸರ್ಕಾರಿ ಪಪೂ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಸವರಾಜ ಕೆಂಚಮಲ್ಲ, ಸದಸ್ಯರಾದ ಶಿವಾನಂದ ಕೋರಿಶೆಟ್ಟರ, ಕೃಷ್ಣಾಜಿ ತೇಲ್ಕರ್, ಮಾಲತೇಶ ಕಿತ್ತೂರ, ವ್ಯವಸಾಯ ಸಹಕಾರಿ ಸಂಘದ ನಿರ್ದೇಶಕರಾದ ಅಶೋಕ ತೇಲ್ಕರ್, ವಿರೂಪಾಕ್ಷಪ್ಪ ಶೀತಾಳ, ಕೋಟೆಪ್ಪ ಗೊರವರ, ಚನ್ನಪ್ಪ ಹೊನ್ನಮ್ಮನವರ, ಆರೋಗ್ಯ ಇಲಾಖೆ ಇಂಜನಿಯರ್ ಅಜಿತ, ಡಾ.ಶ್ರೀವಿದ್ಯಾ ಅನಂತರಡ್ಡಿ, ಡಾ. ದೀಪ್ತಿ ಮಮದಾಪುರ, ಡಾ.ವಿನಯ ಕವಳಾಸ್ತ್ರ ಹಿರೇಮಠ, ಡಾ. ಫಯಾಜ್ ಎ. ಜವಳಿ, ಸಿಬ್ಬಂದಿ ಸುರೇಶ ಮೈಲಾಳ, ನಾಗರಾಜ ಈಳಗೇರ, ಬಸವರಾಜ ಕೊಂಡವಾಡಿ, ವಿಶ್ವನಾಥ ಬನ್ನೆಪ್ಪಗೌಡ್ರ ಸೇರಿದಂತೆ ಅನೇಕರಿದ್ದರು.

ಮಾಲತೇಶ ಪುಟ್ಟನಗೌಡ್ರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net