ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಏ.1ರಿಂದ

NAREGA LOGO download
Published on

ನರೇಗಲ್ಲ: ಏಪ್ರಿಲ್ 1ರಿಂದ ನರೇಗಾ ಯೋಜನೆಯಡಿ ಸಮುದಾಯ ಕಾಮಗಾರಿ ಪ್ರಾರಂಭಿಸಿ ಕೂಲಿಕಾರರಿಗೆ ಕೆಲಸ ನೀಡಲಾಗುವುದು. ಎಲ್ಲ ಕಾಯಕ ಬಂಧುಗಳು ನಮೂನೆ-6 ತುಂಬಿ ಕೂಲಿಕಾರರನ್ನು ಕೆಲಸಕ್ಕೆ ಕರೆತರಬೇಕು ಎಂದು ಹಾಲಕೆರೆ ಪಿಡಿಒ ಶಣರಪ್ಪ ನರೇಗಲ್ಲ ತಿಳಿಸಿದರು.

ಸಮೀಪದ ಹಾಲಕೆರೆ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ಕಾಯಕ ಬಂಧುಗಳ ಸಭೆಯಲ್ಲಿ ಅವರು ಮಾತನಾಡಿ, ಖಾತ್ರಿ ಕೆಲಸಕ್ಕೆ ಬರುವ ಕೂಲಿಕಾರರಿಗೆ ದಿನಕ್ಕೆ 349 ರೂ. ಗರಿಷ್ಠ ಕೂಲಿ ಪಾವತಿಸಲಾಗುತ್ತದೆ. ಕಾಯಕ ಬಂಧುಗಳ ಕೂಲಿಕಾರರನ್ನು ಕೆಲಸಕ್ಕೆ ತರೆತಂದು ಎರಡು ಬಾರಿ ಕಡ್ಡಾಯವಾಗಿ ಹಾಜರಿ ಹಾಕಿಸಬೇಕು ಎಂದರು.

ಐಇಸಿ ಸಂಯೋಜಕ ಮಂಜುನಾಥ ಹಳ್ಳದ ಮಾತನಾಡಿ, ವಲಸೆ ತಡೆಗಟ್ಟುವ ಸಲುವಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲಾಗುತ್ತದೆ. ಕೆಲಸ ನೀಡಲು ಇನ್ನೂ ಒಂದು ವಾರ ಬಾಕಿ ಇದ್ದು, ಅಷ್ಟರೊಳಗೆ ಜಾಬ್ ಕಾರ್ಡ್ ಪರಿಶೀಲನೆ ಮಾಡಿ ಎಬಿಪಿಎಸ್, ಎನ್​ಪಿಸಿ ಲಿಂಕ್ ಮಾಡಿಸಬೇಕು ಎಂದರು.

ನಮೂನೆ -6ರಲ್ಲಿ ಕೆಲಸದ ಬೇಡಿಕೆ ಸಲ್ಲಿಸುವುದರ ಕುರಿತು ಮಾಹಿತಿ ನೀಡಲಾಯಿತು. ಶೇ. 50ರಷ್ಟು ಮಹಿಳೆಯರಿಗೆ ಎಂಆರ್ ಒದಗಿಸುವುದು. ನಂತರ ಕೆಲಸಕ್ಕೆ ಬರುವ ಕೂಲಿಕಾರರಿಗೆ ಅಳತೆ ಪ್ರಮಾಣ ನೀಡಿ ಎನ್​ಎಂಎಂಎಸ್ ಆಪ್ ಇಲ್ಲದೆ ಯಾವುದೇ ಕಾಮಗಾರಿ ಕೈಗೊಳ್ಳಲು ಅವಕಾಶವಿಲ್ಲ. ಎರಡು ಬಾರಿ ಎನ್​ಎಂಎಂಎಸ್ ಆಪ್​ನಲ್ಲಿ ಹಾಜರಿಯನ್ನು ಕಡ್ಡಾಯವಾಗಿ ಹಾಕಿಸಬೇಕು. ನೇರವಾಗಿ ಆಧಾರ್ ಬೆಸ್ ಮೂಲಕ ಫಲಾನುಭವಿಗಳಿಗೆ ಕೂಲಿ ಹಣ ಪಾವತಿಯಾಗುತ್ತದೆ ಎಂದು ಮಾಹಿತಿ ನೀಡಲಾಯಿತು.

ನೀಡಗುಂದಿ ಗ್ರಾಪಂನಲ್ಲಿ ಕಾಯಕ ಬಂಧುಗಳ ಸಭೆ ನಡೆಸಲಾಯಿತು. ಪಿಡಿಒ ಅಮರೇಶ ಮೂಲಿಮನಿ, ಕಾರ್ಯದರ್ಶಿ ಶರಣಪ್ಪ ಮೇಟಿ, ತಾಂತ್ರಿಕ ಸಹಾಯಕ ಪ್ರವೀಣ ಡಿ., ಟಿಎಎ ಮುತ್ತು ಕಟ್ಟಿ, ಬಿಎಪ್ಟಿ ಚಂದ್ರಕಾಂತ ಲಮಾಣಿ, ಡಿಇಒ ದೀಪಾ, ಜಿಕೆಂಎ ಅನಿತಾ ಗಡಾದ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net