ಬದುಕುವ ಗ್ಯಾರಂಟಿ ಕೊಡಿ : ಸಿ.ಟಿ.ರವಿ ಕಿಡಿ

oplus_2
oplus_2
Published on


ಕೊಡಗು : ರಾಜ್ಯ ಸರ್ಕಾರ ನಮಗೆ ಬದುಕುವ ಗ್ಯಾರಂಟಿ ಕೊಡಬೇಕು ಎಂದು ಮಾಜಿ ಶಾಸಕ ಸಿ.ಟಿ.ರವಿ ಒತ್ತಾಯಿಸಿದರು.

ಕೊಡಗಿನ ಸಿದ್ದಾಪುರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕುಶಾಲನಗರ ತಾಲೂಕು ವಾಲ್ನೂರು ಗ್ರಾಮದಲ್ಲಿ ಚುನಾವಣಾ ಪ್ರಚಾರ ನಿರತ ಬಿಜೆಪಿ ಕಾರ್ಯಕರ್ತರಿಗೆ ಗುರುವಾರ ರಾತ್ರಿ ಕಾರೊಂದು ಡಿಕ್ಕಿ ಹೊಡೆದು ಒಬ್ಬರು ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಿಜೆಪಿ ಕಾರ್ಯಕರ್ತನನ್ನು ದುರುದ್ದೇಶದಿಂದಲೇ ಹತ್ಯೆ ಮಾಡಲಾಗಿದೆ. ಈ ಕುರಿತು ಗೃಹ ಸಚಿವರು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಹುಬ್ಬಳ್ಳಿಯಲ್ಲಿ ಯುವತಿಯ ಕೊಲೆ ನಡೆದಿದೆ. ಕೇರಳದಿಂದ ಕರ್ನಾಟಕಕ್ಕೆ ಲವ್ ಜಿಹಾದ್ ಪ್ರವೇಶ ಪಡೆದಿದೆ. ಹೀಗಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರದ ಚರ್ಮ ಕೋಣನ ಚರ್ಮಕ್ಕಿಂತಲೂ ದಪ್ಪ ಇದೆ ಎಂದು ಕಿಡಿಕಾರಿದರು.

ಎಕ್ಸ್‌ನಲ್ಲಿ ಪೋಸ್ಟ್ :
ಬಿಜೆಪಿ ಪರ ಚುನಾವಣಾ ಪ್ರಚಾರ ಕೈಗೊಳ್ಳುತ್ತೀರಾ? ಅವರು ನಿಮ್ಮ ಮೇಲೆ ಕಾರು ಹರಿಸಿ ಸಾಯಿಸುತ್ತಾರೆ ಮತ್ತು ಎಲ್ಲರೂ ಮೌನವಾಗಿರುತ್ತಾರೆ. ನನಗಲ್ಲ ಎನ್ನುವ ಕಾಲ ಇದಲ್ಲ. ಪ್ರತಿಯೊಂದು ಬೆಳವಣಿಗೆಗೂ ನಮ್ಮ ಮೌನವು ಒಂದು ಕಾರಣ. ಇನ್ನಾದರೂ ಎದ್ದು ನಿಲ್ಲು ಹಿಂದು. ಸುಮ್ಮನಿದ್ದರೆ ದೇಶವೂ ಇರದು, ಜಾತಿಯೂ ಇರದು, ನಾನು ಇರೆನು, ನೀನು ಇರಲಾರೆ ಎಂದು ಸಿ.ಟಿ.ರವಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net