

ಮಡಿಕೇರಿ:
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ಕೊಡಲು ಪಕ್ಷದ ಕಾರ್ಯಕರ್ತರಲ್ಲಿ ಯಾವುದೇ ಹಿಂಜರಿಕೆ ಇರಬಾರದು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ಸೋಮವಾರ ಕುಶಾಲನಗರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಮಿಕ ವಿಭಾಗದ ಕುಶಾಲನಗರ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಇದ್ದವರು ಕಾಮಗಾರಿಯ ವಿಳಂಬವೇ ಅಭಿವೃದ್ಧಿ ಎಂದು ನಂಬಿಕೊAಡAತಿತ್ತು. ಈಗ ಅದೆಲ್ಲಾ ಬದಲಾಗಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸೋಮವಾರಪೇಟೆ ಟರ್ಫ್ ಮೈದಾನ ಕಾಮಗಾರಿ ಮುಗಿದು ಈಗ ಕ್ರೀಡಾಪಟುಗಳಿಗೆ ಲಭ್ಯವಾಗಿದೆ. ಕುಶಾಲನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಯೋಜನೆ ಸದ್ಯದಲ್ಲೇ ಕಾರ್ಯರೂಪಕ್ಕೆ ಬರಲಿದೆ.
ಪಕ್ಷ ಸಂಘಟನೆಯಲ್ಲಿ ಎಲ್ಲಾ ಮುಂಚೂಣಿ ಘಟಕಗಳ ಪಾತ್ರ ದೊಡ್ಡದಾಗಿದೆ. ಶ್ರಮಜೀವಿ ಕಾರ್ಮಿಕರು ಕಾಂಗ್ರೆಸ್‌ನ ಬೆನ್ನೆಲಬು ಇದ್ದಂತೆ. ಪಕ್ಷ ಬೇಧ ಬಿಟ್ಟು ಎಲ್ಲಾ ಕಾರ್ಮಿಕರಿಗೂ ಸರ್ಕಾರದ ಸೌಲಭ್ಯ ಒದಗಿಸುವ ಕೆಲಸ ಕಾಂಗ್ರೆಸ್ ಕಾರ್ಮಿಕರ ಘಟಕ ಮಾಡಬೇಕು. ಉದ್ಯೋಗದಾತರು ಮತ್ತು ಕಾರ್ಮಿಕರ ಮಧ್ಯೆ ಸಂಬAಧಗಳು ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕು.
ಮುಂದೆ ಲೋಕಸಭಾ ಚುನಾವಣೆಯ ಟಾಸ್ಕ್ ಕಾರ್ಯಕರ್ತರ ಮುಂದೆ ಇದ್ದು ವಿಧಾನಸಭಾ ಚುನಾವಣೆ ಮಾದರಿಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ. ಶುಶ್ರೂತ ಗೌಡ ಮಾತನಾಡಿ ಮೂಲತಃ ವೈದ್ಯನಾದ ತನಗೆ ರಾಹುಲ್ ಗಾಂಧಿ ಜತೆಗಿನ ಭಾರತ್ ಜೋಡೋ ಯಾತ್ರೆ ಭಾರತದ ನೈಜ ಸಮಸ್ಯೆಗಳ ಅರಿವು ಮೂಡಿಸಿತು. ಈ ಸಮಸ್ಯೆಗಳಿಗೆ ಕಾಂಗ್ರೆಸ್‌ನಿAದ ಮಾತ್ರ ಪರಿಹಾರ ಎನ್ನುವುದನ್ನು ಅರಿತುಕೊಳ್ಳುವಂತಾಯಿತು. ಹಾಗಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಲೋಕಸಭಾ ಸದಸ್ಯನಾಗಲು ಬಯಸಿದ್ದೇನೆ. ಕೊಡಗಿನಲ್ಲಿ ಬಿಜೆಪಿ ಕೋಟೆ ಛಿದ್ರ ಛಿದ್ರವಾಗಿದೆ. 2024ರ ಚುನಾವಣೆಯಲ್ಲೂ ಇದು ಪುನರಾವರ್ತನೆ ಆಗಲಿದೆ. ಕೊಡಗಿನ ಸಮಸ್ಯೆಗಳ ಬಗ್ಗೆ ಜನರ ಅಬಿಪ್ರಾಯ ತೆಗೆದುಕೊಂಡು ಕೆಲಸ ಮಾಡಲಾಗುವುದು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ, ಕಾರ್ಮಿಕ ಘಟಕದ ರಾಜ್ಯ ಉಪಾಧ್ಯಕ್ಷೆ ಹರಿಣಿ ಗೌಡ, ಕೆಪಿಸಿಸಿ ಸದಸ್ಯ ಮಂಜುನಾಥ ಗುಂಡೂರಾವ್, ಕೆಪಿಸಿಸಿ ಸಂಯೋಜಕ ನಟೇಶ್ ಗೌಡ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ದಿನೇಶ್, ಬ್ಲಾಕ್ ಅಧ್ಯಕ್ಷ ಶಿವಶಂಕರ್, ನಗರ ಅಧ್ಯಕ್ಷ ಶಿವಕುಮಾರ್ ಮಾತನಾಡಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪ್ರಮುಖರಾದ ಜೋಸೆಫ್ ವಿಕ್ಟರ್ ಸೋನ್ಸ್, ಪುರಸಭೆ ಸದಸ್ಯರಾದ ದಿನೇಶ್, ಜಯಲಕ್ಷಿö್ಮÃ ನಂಜುAಡಸ್ವಾಮಿ, ಪ್ರಮುಖರಾದ ಹಮೀದ್, ಅಣ್ಣಯ್ಯ ಮತ್ತಿತರರು ಇದ್ದರು.