ಗ್ಯಾರಂಟಿ ಯೋಜನೆಗಳು ಸಮರ್ಪಕ ಅನುಷ್ಠಾನವಾಗಲಿ

17 nrp 3
Published on

ಎನ್.ಆರ್.ಪುರ: ರಾಜ್ಯಸರ್ಕಾರ ಅಧಿಕಾರಕ್ಕೆ ಬಂದ ಮೂರು ತಿಂಗಳೊಳಗೆ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ದು, ಅಧಿಕಾರಿಗಳೊಂದಿಗೆ ಕೈ ಜೋಡಿಸಿ, ವಿಶ್ವಾಸಕ್ಕೆ ಪಡೆದು ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದು ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಾನಂದಸ್ವಾಮಿ ಹೇಳಿದರು.

ತಾಪಂ ಸಾಮರ್ಥ್ಯ ಸೌಧದಲ್ಲಿ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿ, ಗ್ಯಾರಂಟಿ ಯೋಜನೆಗಳ ತಾಂತ್ರಿಕ ಸಮಸ್ಯೆ,ಇನ್ನಿತರೆ ತೊಡಕುಗಳ ಬಗ್ಗೆ ಸಭೆಯಲ್ಲಿ ಚರ್ಚಿಸಬೇಕು. ಚರ್ಚಿಸಿದ ವಿಷಯಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಿ, ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಸಮಿತಿ ಸದಸ್ಯರಿಗೆ ತಿಳಿಸಿದರು.

ಶಕ್ತಿ ಯೋಜನೆಯಡಿ ಈ ವರೆಗೆ 1.57 ಕೋಟಿ ಮಹಿಳೆಯರು ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಿದ್ದಾರೆ ಎಂದು ಚಿಕ್ಕಮಗಳೂರು ಕೆಎಸ್‌ಆರ್‌ಟಿಸಿ ಡಿಪೋ ಬ್ರೇಕ್ ಇನ್ಸ್‌ಪೆಕ್ಟರ್ ಸುರೇಶ್‌ನಾಯ್ಕ ಮಾಹಿತಿ ನೀಡಿದರು. ತಾಲೂಕಿನ ಅರ್ಧ ಭಾಗ, ಕೊಪ್ಪ, ಶೃಂಗೇರಿ, ಕೊಪ್ಪ ಮತ್ತು ಎನ್.ಆರ್.ಪುರ ತಾಲೂಕುಗಳ ಲಾನುಭವಿಗಳು ಈ ಯೋಜನೆ ವ್ಯಾಪ್ತಿಗೆ ಬರುತ್ತಾರೆ. 53.54 ಲಕ್ಷ ರೂ ಆದಾಯ ಬಂದಿದೆ.

ಸಮಿತಿ ಸದಸ್ಯ ಬೆಸಿಲ್ ಮಾತನಾಡಿ, ಕೆಲವು ಚಾಲಕರು ಮಹಿಳೆಯರಿಗೆ ಬಸ್ ನಿಲ್ಲಿಸುವುದಿಲ್ಲ, ವೇಗವಾಗಿ ವಾಹನ ಚಲಾಯಿಸುತ್ತಾರೆ ಈ ಬಗ್ಗೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು. ಶಿವಾನಂದಸ್ವಾಮಿ ಮಾತನಾಡಿ, ಇದು ಮೊದಲ ಸಭೆ. ಇದರಲ್ಲಿ ಸಮಸ್ಯೆಗಳ ಬಗ್ಗೆ ತಿಳಿಸಿ ಮುಂದಿನ ಸಭೆ ವೇಳೆಗೆ ಇದು ಮತ್ತೆ ಚರ್ಚೆಯಾಗಬಾರದು. ತಾಲೂಕು ಮಟ್ಟದ ಸಭೆಯಲ್ಲಿ ಚರ್ಚಿತವಾದ ವಿಷಯವನ್ನು ಜಿಲ್ಲಾಮಟ್ಟದ ಸಭೆಗೆ ತಿಳಿಸಬೇಕು, ನಾವು ಇದನ್ನು ರಾಜ್ಯಮಟ್ಟದ ಸಭೆಯಲ್ಲಿ ಚರ್ಚಿಸುತ್ತೆವೆ ಎಂದರು.

ತಾಲೂಕಿನ 911 ಪದವೀಧರರು ಯುವನಿಧಿ ಯೋಜನೆಗೆ ನೋಂದಣಿ ಮಾಡಿಸಿಕೊಂಡಿದ್ದು, ನೋಂದಣಿ ಮಾಡಿಸಿಕೊಂಡ ಎಲ್ಲರಿಗೂ ಯುವನಿಧಿ ಹಣ ಜಮೆ ಆಗಿದೆ. ಈ ವರಗೆ 27.31ಲಕ್ಷ ರೂ. ಹಣ ಸಂದಾಯವಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ಬೀಬಿಜಾನ್ ಸಭೆಗೆ ತಿಳಿಸಿದರು. ತಾಲೂಕಿನಲ್ಲಿ ಒಟ್ಟು 19,364 ಮನೆಗಳಿದ್ದು, ಅದರಲ್ಲಿ 17,073 ಗೃಹಲಕ್ಷ್ಮೀ ಕ್ಷೀತ್ಮ ಯೋಜನೆಗೆ ನೋಂದಣಿಯಾಗಿದ್ದು, ಆಗಸ್ಟ್-2023 ರಿಂದ ಪ್ರಾರಂಭವಾದ ಈ ಯೋಜನೆಯಿಂದ 10.08 ಲಕ್ಷ ರೂ. ಹಣ ಗ್ರಾಹಕರಿಗೆ ಮನ್ನಾ ಆಗಿದೆ. ಈ ಯೋಜನೆ ಶೇ.100ರಷ್ಟು ಲಾನುಭವಿಗಳಿಗೆ ತಲುಪಿದೆ ಎಂದು ಮೆಸ್ಕಾಂ ಇಲಾಖೆ ಎಇಇ ಗೌತಮ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net