

ಗಂಗಾವತಿ: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳು ಲಾನುಭವಿಗಳಿಗೆ ವರದಾನವಾಗಿದ್ದು, ಪ್ರತಿಯೊಬ್ಬ ಅರ್ಹರಿಗೆ ದೊರೆಯಬೇಕಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಹೇಳಿದರು.
ತಾಲೂಕಿನ ಶ್ರೀರಾಮನಗರದ ಸ.ಹಿ.ಪ್ರಾ.ಶಾಲೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಗ್ರಾಪಂ ಮಟ್ಟದ ಪರಿಶೀಲನೆ ಸಭೆ ಉದ್ಘಾಟಿಸಿ ಮಾತನಾಡಿದರು.
ಗ್ರಾಪಂ ವ್ಯಾಪ್ತಿಯಲ್ಲಿ 2161 ಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆ ತಲುಪಿದ್ದು, ತಾಂತ್ರಿಕ ಕಾರಣಗಳಿಂದ 60 ಲಾನುಭವಿಗಳಿಗೆ ತಲುಪಿಲ್ಲ. ಬೆಳಗ್ಗೆ 6 ರಿಂದ 10ರವರಗೆ ಪಡಿತರ ವಿತರಿಸಲು ನ್ಯಾಯಬೆಲೆ ಅಂಗಡಿದಾರರಿಗೆ ಸೂಚಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ 2150 ಮನೆಗಳಿಗೆ ಉಚಿತ ವಿದ್ಯುತ್ ಕಲ್ಪಿಸಲಾಗಿದೆ ಎಂದರು.
ಜಿಪಂ ಸಿಇಒ ವರ್ಣಿತ್ ನೇಗಿ ಮಾತನಾಡಿ, ಜಿಲ್ಲಾ ಮತ್ತು ತಾಲೂಕು ಸಮಿತಿ ಸಮಿತಿಯ ಉತ್ತಮ ಕಾರ್ಯ ಅಧಿಕಾರಿಗಳ ಸಮನ್ವಯತೆಯಿಂದ ಗ್ಯಾರಂಟಿ ಯೋಜನೆ ಸೇವೆ ಶೇ.98 ಗುರಿ ಸಾಧಿಸಲಾಗಿದೆ. ರಾಜ್ಯದಲ್ಲಿ ಕೊಪ್ಪಳ ಜಿಲ್ಲೆ ಮೊದಲ ಸ್ಥಾನ ಪಡೆದಿದೆ ಎಂದರು.
ತಾಪಂ ಇಒ ರಾಮರೆಡ್ಡಿ ಪಾಟೀಲ್,ಯೋಜನೆ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷರಾದ ಡಾ.ಕೆ.ವೆಂಕಟೇಶಬಾಬು, ದೇವರಾಜ ಬಾವಿಕಟ್ಟೆ, ಸದಸ್ಯರಾದ ಕೆ.ಲಕ್ಷ್ಮೀ ನಾಗೇಶ್ವರರಾವ್, ಸೋಮನಾಥ್ ದೊಡ್ಡಮನಿ, ಗ್ರಾಪಂ ಅಧ್ಯಕ್ಷ ಶಾಂತಪ್ಪ, ಉಪಾಧ್ಯಕ್ಷೆ ಹುಸೇನ್‌ಬೀ, ಸದಸ್ಯರಾದ ರೆಡ್ಡಿ ವೀರರಾಜು, ಪಿ.ರಾಮಕಷ್ಣ, ರಾಮಕಷ್ಣ ರಾಜು, ಸುಂಕಣ್ಣ, ಸಾಂಬಮೂರ್ತಿ, ಸುನಿತಾ, ಪಿಡಿಓ ನಾಗೇಶ್ ಕುರ್ಡಿ, ಮಾಜಿ ಅಧ್ಯಕ್ಷ ಮಹ್ಮದ್ ರಫೀ, ಮುಖಂಡರಾದ ಕೆ.ಸುಬ್ರಮಣ್ಯೇಶ್ವರರಾವ್, ಕೆ.ಪವನ್, ಪೊಟ್ಲೂರಿ ವೆಂಕಟೇಶ್ವರರಾವ್, ಸಿಎಚ್ ವೆಂಕಟರಾಮಕಷ್ಣ, ಕೆ.ಶ್ರೀನಿವಾಸ್, ಕೆ.ನಾಗೇಶ್ವರರಾವ್, ಚಿಲುಕೂರಿ ವೆಂಕಟರಾಮಕಷ್ಣ, ವರದರಾಜು, ಸುಭಾಷ್ ಚಂದ್ರಬೋಸ್ ಇತರರಿದ್ದರು. ಗೃಹಲಕ್ಷ್ಮಿ ಯೋಜನೆ ಹಣ ಸದ್ಬಳಕೆ ಬಗ್ಗೆ ಲಾನುಭವಿಗಳು ಅಭಿಪ್ರಾಯ ಹಂಚಿಕೊಂಡರು.