ಗ್ಯಾರಂಟಿ ಯೋಜನೆಯಿಂದ ಬಡವರಿಗೆ ಅನುಕೂಲ

Guarantee scheme benefits the poor
ತಾಳಿಕೋಟೆ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯರಾಗಿ ಸಂಗಮೇಶ ದೇಸಾಯಿ ಅಧಿಕಾರ ವಹಿಸಿಕೊಂಡರು. ಶಾಸಕ ಸಿ.ಎಸ್​.ನಾಡಗೌಡ ಇದ್ದರು.
Published on

ತಾಳಿಕೋಟೆ: ಕಾಂಗ್ರೆಸ್​ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಅನುಕೂಲವಾಗಿದೆ ಎಂದು ಶಾಸಕ ಸಿ.ಎಸ್​.ನಾಡಗೌಡ(ಅಪ್ಪಾಜಿ) ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯ ಸಂಗಮೇಶ ದೇಸಾಯಿ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಬಸ್​ ಸಂಚಾರದ ವ್ಯವಸ್ಥೆ ಸಿಕ್ಕಿದೆ ಎಂದರು.

ಶಾಸಕ ಸಿ.ಎಸ್​.ನಾಡಗೌಡ(ಅಪ್ಪಾಜಿ) ಸಮ್ಮುಖದಲ್ಲಿ ಸಮಿತಿ ಅಧ್ಯರಾಗಿ ಸಂಗಮೇಶ ದೇಸಾಯಿ ಅಧಿಕಾರ ಸ್ವೀಕರಿಸಿದರು.

ಗ್ಯಾರಂಟಿ ಸಮಿತಿ ಜಿಲ್ಲಾಧ್ಯ ಇಲಿಯಾಸ ಭೋರಾಮಣಿ ಮತ್ತು ತಾಲೂಕು ಅಧ್ಯ ಸಂಗಮೇಶ ದೇಸಾಯಿ ಅವರನ್ನು ಶಾಸಕ ನಾಡಗೌಡ ಸನ್ಮಾನಿಸಿದರು.

ಕೆಪಿಸಿಸಿ ಸದಸ್ಯ ಬಿ.ಎಸ್​.ಪಾಟೀಲ(ಯಾಳಗಿ), ಅಸ್ಕಿ ಫೌಂಡೇಷನ್​ ಅಧ್ಯ ಸಿ.ಬಿ.ಅಸ್ಕಿ, ಜಿಲ್ಲಾ ಕಾಂಗ್ರೆಸ್​ ಉಪಾಧ್ಯ ಸಿದ್ದನಗೌಡ ಪಾಟೀಲ(ನಾವದಗಿ), ಕಾರ್ಯದರ್ಶಿ ವಿಜಯಸಿಂಗ್​ ಹಜೇರಿ, ಬ್ಲಾಕ್​ ಕಾಂಗ್ರೆಸ್​ ಅಧ್ಯ ಮೈಹಿಬೂಬ ಚೋರಗಸ್ತಿ, ಪ್ರಭುಗೌಡ ಮದರಕಲ್ಲ, ಪರಶುರಾಮ ತಂಗಡಗಿ, ಅಕ್ಕಮಹಾದೇವಿ ಕಟ್ಟಿಮನಿ, ಸಂಗನಗೌಡ ಪಾಟೀಲ, ನೀಲಮ್ಮ ಪಾಟೀಲ, ಯಾಜ ಉತ್ನಾಳ, ಸಂಗನಗೌಡ ಅಸ್ಕಿ, ಕಾಸಿಂ ಪಟೇಲ್​, ಶೌಕತ್​ ಲಾಹೋರಿ, ಗೋಪಾಲ ಕಟ್ಟಿಮನಿ, ಮೋದಿನಸಾ ನಗಾರ್ಚಿ, ಆಸ್​ೀ ಕೆಂಭಾವಿ, ಸದ್ದಾಂ ಕುಂಟೋಜಿ, ಶಿವರಾಜ ನಾಗೂರ, ತಾಪಂ ಇಒ ನಿಂಗಪ್ಪ ಮಸಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net