ಪ್ರತಿ ಜಿಲ್ಲೆಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರ ನೇಮಕ

udp-13-cm 1
Published on

ಉಡುಪಿ: ಜನರು ಬೆಲೆ ಏರಿಕೆಯಿಂದ ಜೀವನ ನಡೆಸುವುದು ಕಷ್ಟ ಸಾಧ್ಯ ಎಂಬುದನ್ನು ಅರಿತು ಗ್ಯಾರೆಂಟಿ ಯೋಜನೆ ಜಾರಿಗೊಳಿಸಲಾಗಿದೆ. ಗ್ಯಾರೆಂಟಿ ಯೋಜನೆಗಳ ಬಗ್ಗೆ ಬಿಜೆಪಿ ಜನರಿಗೆ ತಪು ಮಾಹಿತಿ ನೀಡುತ್ತಿದ್ದು, ಇದನ್ನು ಹೋಗಲಾಡಿಸಲು ಪ್ರತಿ ಜಿಲ್ಲೆಯಲ್ಲಿ ಸಮಾವೇಶ ನಡೆಸಲಾಗುತ್ತಿದ್ದು, ಯಾರೂ ಮಧ್ಯವರ್ತಿಗಳಿಲ್ಲದೆ ಯೋಜನೆ ಲಾನುಭವಿಗಳ ಖಾತೆಗೆ ಹಣ ಜಮೆಯಾಗುವುದು ಗ್ಯಾರೆಂಟಿ ಯೋಜನೆ ವಿಶೇಷತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬುಧವಾರ ಕುಂಜಿಬೆಟ್ಟುವಿನ ಮಹಾತ್ಮ ಗಾಂಧೀ ಮೆಮೋರಿಯಲ್​ ಕಾಲೇಜಿನ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾಪಂಚಾಯಿತಿ ವತಿಯಿಂದ ಹಮ್ಮಿಕೊಂಡಿರುವ ಗ್ಯಾರಂಟಿ ಯೋಜನೆಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

ಪ್ರತಿ ಜಿಲ್ಲೆಯಲ್ಲಿ ಅನುಷ್ಠಾನ ಸಮಿತಿ ಅಧ್ಯಕ್ಷರ ನೇಮಕ ಮಾಡಲಾಗುವುದು. ಗ್ಯಾರೆಂಟಿ ಯೋಜನೆ ಚುನಾವಣೆ ಗಿಮಿಕ್​ ಅಲ್ಲ. 5 ವರ್ಷವೂ ಯೋಜನೆ ಜಾರಿಯಲ್ಲಿರಲಿದೆ. ಅರ್ಹ ಲಾನುಭವಿಗಳಿಗೆ ಯೋಜನೆ ಪ್ರಯೋಜನ ತಲುಪಿಸಲಾಗುವುದು. ಅಭಿವೃದ್ಧಿ ಕೆಲಸಗಳಿಗೆ ದುಡ್ಡು ಇಲ್ಲ ಎಂಬುದು ಶುದ್ಧ ಸುಳ್ಳು. ಈ ಬಾರಿಗೆ ಬಜೆಟ್ನಲ್ಲಿ 1.20 ಲಕ್ಷ ಕೋಟಿ ರೂ. ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಲಾಗಿದೆ. ಗ್ಯಾರೆಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ. ನೀಡಿದ್ದರೂ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿಲ್ಲ. ಈ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ ಎಂದರು.

ಮೋದಿ ಕಾಲದಲ್ಲಿ ಕರ್ನಾಟಕಕ್ಕೆ ಅನ್ಯಾಯ
ಮೋದಿ ಕಾಲದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ವಾರ್ಷಿಕ ಸುಮಾರು 4.30 ಲಕ್ಷ ಕೋಟಿ ರೂ. ತೆರಿಗೆ ಕೇಂದ್ರಕ್ಕೆ ಸಲ್ಲುತ್ತಿದೆ. ಇದರಲ್ಲಿ 50257 ಕೋಟಿ ರೂ. ಮಾತ್ರ ವಾಪಾಸು ಬರುತ್ತಿದೆ. 100 ರೂ. ತೆರಿಗೆ ಕೇಂದ್ರಕ್ಕೆ ಕೊಟ್ಟರೆ 13 ರೂ. ಮಾತ್ರ ವಾಪಾಸು ಬರುತ್ತಿದೆ. ಇದು 7 ಕೋಟಿ ಕನ್ನಡಿಗರಿಗೆ ಮಾಡುವ ಅನ್ಯಾಯವಾಗಿದೆ. ಈ ಬಗ್ಗೆ ರಾಜ್ಯ 25 ಮಂದಿ ಬಿಜೆಪಿ ಎಂಪಿಗಳು ಮಾತನಾಡುತ್ತಿಲ್ಲ ಎಂದರು.

ಗ್ಯಾರೆಂಟಿ ಅಂಕಿಅಂಶ ನೀಡಿದ ಸಿಎಂ
ಜಿಲ್ಲೆಯಲ್ಲಿ 87.64 ಲಕ್ಷ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ನಲ್ಲಿ ಪ್ರಯಾಣ ಬೆಳೆಸಿದ್ದು, ಸಾರಿಗೆ ಇಲಾಖೆಗೆ 33 ಕೋಟಿ ರೂ. ನೀಡಲಾಗಿದೆ. ಗ್ರಹಜ್ಯೋತಿ ಯೋಜನೆಯಲ್ಲಿ 3,11,652 ಮಂದಿ ಲಾನುಭವಿಗಳಿದ್ದು, 114 ಕೋಟಿ ರೂ. ಪಾವತಿಸಲಾಗಿದೆ. 7.66 ಲಕ್ಷ ಅನ್ನಭಾಗ್ಯ ಲಾನುಭವಿಗಳಿಗೆ ಅಕ್ಕಿ ಖರೀದಿಗೆ 85.48 ಕೋಟಿ ರೂ. ನೀಡಲಾಗಿದೆ. ಪದವೀಧರ ನಿರುದ್ಯೋಗಿಗಳಿಗೆ ಯುವನಿಧಿ ಯೋಜನೆಯಲ್ಲಿ 2,341 ಮಂದಿಗೆ 14.96 ಲಕ್ಷ ರೂ. ಹಣ ಜಮೆ ಮಾಡಲಾಗಿದೆ. ಎಲ್ಲಾ 5 ಗ್ಯಾರೆಂಟಿಗಳಿಂದ ಪ್ರತಿ ಕುಟುಂಬಕ್ಕೆ ತಿಂಗಳಿಗೆ 4 ರಿಂದ 5 ಸಾವಿರ ರೂ. ಕೊಡುತ್ತಿದ್ದೇವೆ ಎಂದು ಸಿಎಂ ಮಾಹಿತಿ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷಿ$್ಮ ಆರ್​. ಹೆಬ್ಬಾಳಕರ್​ ಮಾತನಾಡಿ, ಗ್ಯಾರೆಂಟಿ ಯೋಜನೆಯಿಂದ ರಾಜ್ಯದಲ್ಲಿ ಹಿಂದುಳಿದವರು, ಬಡವರು, ಮಹಿಳೆಯರು, ಶ್ರಮಿಕರಿಗೆ ಒಳ್ಳೆಯದಾಗಿದೆ. ಜಿಲ್ಲೆಯಲ್ಲಿ ಶೇ.90ರಷ್ಟು ಯೋಜನೆ ಅನುಷ್ಠಾನವಾಗಿದೆ. ಕಾಂಗ್ರೆಸ್​ ಜನರ ಭಾವನೆ ಜೊತೆ ಆಟ ಆಡುವುದಿಲ್ಲ. ಜನರ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತದೆ ಎಂದರು.

ಮೀನುಗಾರಿಕಾ ಸಚಿವ ಮಂಕಾಳ್​ ವೈದ್ಯ ಮಾತನಾಡಿ, ಕರ್ನಾಟಕದ ಗ್ಯಾರೆಂಟಿ ಯೋಜನೆ ಜನಪ್ರಿಯತೆಯಿಂದಾಗಿ ಮೋದಿ ಕೂಡ ಗ್ಯಾರೆಂಟಿ ನೀಡಲು ಶುರು ಮಾಡಿದ್ದಾರೆ. ಮೀನುಗಾರರಿಗೆ ಮೊದಲ ಬಾರಿ ಬಜೆಟ್​ ನಲ್ಲಿ 3 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಸರ್ಕಾರ 2 ಲಕ್ಷ ಕೆಎಲ್​ ಸಬ್ಸಿಡಿ ಡಿಸೇಲ್​ ಬಿಡುಗಡೆಗೊಳಿಸಿದೆ. 8200 ನಾಡದೋಣಿಗಳಿಗೆ ಪ್ರತಿ ತಿಂಗಳು 300 ಲೀ ಸೀಮೆಎಣ್ಣೆ ನೀಡಲಾಗುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್​ ಸದಸ್ಯ ಮಂಜುನಾಥ ಭಂಡಾರಿ, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯೆ ಪುಷ್ಪಾ ಅಮರನಾಥ್​, ಗೇರು ಅಭಿವೃದ್ಧಿ ನಿಗಮ ಅಧ್ಯೆ ಮಮತಾ ಗಟ್ಟಿ, ಕಾಡಾ ಅಧ್ಯಕ್ಷ ಡಾ. ಅಂಶುಮಂತ್​, ಹಿಂದುಳಿದವರ್ಗಗಳ ಆಯೋಗ ಮಾಜಿ ಅಧ್ಯಕ್ಷ ಕೆ. ಜಯಪ್ರಕಾಶ್​ ಹೆಗ್ಡೆ, ಮಾಜಿ ಸಚಿವ ವಿನಯಕುಮಾರ್​ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರೇಜು, ಕಾಂಗ್ರೆಸ್​ ಅಧ್ಯಕ್ಷ ಅಶೋಕ್​ ಕುಮಾರ್​ ಕೊಡವೂರು, ಐವನ್​ ಡಿಸೋಜಾ, ಜಿಪಂ ಸಿಇಒ ಪ್ರತಿಕ್​ ಬಾಯಲ್​, ಉಪವಿಭಾಗಾಧಿಕಾರಿ ರಶ್ಮಿ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಸ್ವಾಗತಿಸಿದರು. ರೋಶನ್​ ಕುಮಾರ್​ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net