ಗ್ಯಾರಂಟಿ ಯೋಜನೆಗಳೆ ಗೆಲುವಿಗೆ ಸಹಕಾರಿ

23 MDL 01
ಮುದಗಲ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಂಭ್ರಮಿಸಿದರು. ಪುರಸಭೆ ಉಪಾಧ್ಯಕ್ಷ ಅಜ್ಮೀರ್ ಬೆಳ್ಳಿಕಟ್ ಸದಸ್ಯರಾದ ಮೈಬೂಬು ಕಡ್ಡಿಪುಡಿ, ತಸ್ಲಿಂ ಮುಲ್ಲಾ, ಹನುಮಂತ ವಾಲ್ಮೀಕಿ, ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ತಮ್ಮಣ್ಣ ಗುತ್ತೇದಾರ, ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ದಾವೂದ್ ಸಾಬ, ಹುಸೇನ್ ಅಲಿ ಇತರರಿದ್ದರು.
Published on

ಮುದಗಲ್: ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ವಿಜಯಸಾಧಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ, ಸಂಭ್ರಮಿಸಿದರು.

ಮುದಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶಂಕರಗೌಡ ಉಪ್ಪಾರನಂದಿಹಾಳ ಮಾತನಾಡಿ, ರಾಜ್ಯದಲ್ಲಿ ಅಹಿಂದ ವರ್ಗವನ್ನು ಹಿಯಾಳಿಸಿರುವುದು, ಸಿಎಂ ಸಿದ್ರಾಮಯ್ಯ ಅವರ ಸುಳ್ಳಿನ ಮುಡಾ ಹಗರಣವನ್ನು ಹಬ್ಬಿಸಿದರೂ ಫಲ ಸಿಗದೇ ಬಿಜೆಪಿಗರು ಸೋತು ಸುಣ್ಣಾಗಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳೆ ಗೆಲುವಿಗೆ ಸಹಕಾರಿಯಾಗಿವೆ ಎಂದರು.

ಪ್ರಮುಖರಾದ ಖಾಲೀದ್, ಬಂದೇನವಾಜ ಬಡಿಗೇರ, ಸತೀಶ ಭೋವಿ, ನಂದಪ್ಪ ಕತ್ತಿ, ಸೈಯದ್ ನ್ಯಾಮತ್ ಖಾದ್ರಿ, ಖದೀರ್, ಮೌನೇಶ ಛಲವಾದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net