ಗ್ಯಾರಂಟಿ ಯೋಜನೆಗಳಿಂದ ಪ್ರಗತಿ ಕುಂಠಿತ

4kabbur1
Published on

ಕಬ್ಬೂರ: ಗ್ಯಾರಂಟಿ ಯೋಜನೆಗಳಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹೇಳಿದರು. ಸಮೀಪದ ಮಮದಾಪುರ ಕೆಕೆ, ಪೊಗತಾನಟ್ಟಿ, ಬೆಳಕೂಡ, ಉಮರಾಣಿ ಗ್ರಾಮದ ಎಸ್ಸಿ ಕಾಲನಿಗೆ ತಲಾ 5 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಹಾಗೂ ಬೆಳಗಲಿ-ಕೆಂಚನಟ್ಟಿ ರಸ್ತೆಯಿಂದ ಪಾಶ್ಚಾಪುರೆ ತೋಟದವರೆಗೆ ಜಿಲ್ಲಾ ಪಂಚಾಯಿತಿಯ 20 ಲಕ್ಷ ರೂ.ಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

ಬಿಜೆಪಿ ಸರ್ಕಾರದಲ್ಲಿ ಬಿಡುಗಡೆಯಾದ ಅನುದಾನವನ್ನು ಕಾಂಗ್ರೆಸ್ ಸರ್ಕಾರ ತಡೆಹಿಡಿದಿತ್ತು. ಸರ್ಕಾರದ ಗಮನ ಸೆಳೆದು ಪುನಃ ಕೆಲವು ಕಾಮಗಾರಿಗೆ ಅನುದಾನ ತಂದಿದ್ದೇನೆ. ಚಳಿಗಾಲದ ಅಧಿವೇಶನದಲ್ಲಿ ಕ್ಷೇತ್ರದ ಸಮಸ್ಯೆ ಬಗ್ಗೆ ಧ್ವನಿ ಎತ್ತುತ್ತೇನೆ. ಕರಗಾವಿ ನೀರಾವರಿ ಸೇರಿ ಅನೇಕ ಯೋಜನೆಗಳ ಪ್ರಸ್ತಾವನೆ ಸಲ್ಲಿಸುತ್ತೇನೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದರು.

ಹೀರಾ ಶುಗರ್ಸ್‌ ನಿರ್ದೇಶಕ ಸುರೇಶ ಬೆಲ್ಲದ ಮಾತನಾಡಿದರು. ಮಲ್ಲೇಶ ಹನುಮಂತಗೋಳ, ರಬಸಿದ್ದ ವಡೇರಹಟ್ಟಿ, ಪರಸಪ್ಪ ಹನುಮನ್ನವರ, ಲಂಕೇಶ ಹನುಮನ್ನವರ, ಲಗಮಪ್ಪ ಮಸಗುಪ್ಪಿ, ಶಿವರಾಜ ಗುಡಸ, ಶಿವಾನಂದ ಪಾಟೀಲ, ಬಸಲಿಂಗ ಕಾಡೇಶಗೋಳ, ಮಹಾದೇವ ಜಿವಣಿ, ಅರುಣ ಮರ‌್ಯಾಯಿ, ಸಿದ್ದಪ್ಪ ಈಟಿ, ಕಲ್ಲಪ್ಪ ಪಾಶ್ಚಾಪೂರೆ, ನಿಜಾಮ ಪೆಂಡಾರೆ, ಬಸವರಾಜ ಬೆಕ್ಕೇರಿ, ನಾರಾಯಣ ನರಗುಂದೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net