ಪಡಿತರ ಅಕ್ರಮ ತಡೆಗೆ ಶ್ರಮಿಸಿ

26 Dwd 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ತಾಲೂಕಿನ ಕೆಲ ಗ್ರಾಮಗಳ ನ್ಯಾಯಬೆಲೆ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ಸರಿಯಾಗಿ ಪಡಿತರ ವಿತರಿಸುತ್ತಿಲ್ಲ. ಸರ್ಕಾರ ನಿಗದಿಪಡಿಸಿದಷ್ಟು ಪಡಿತರ ನೀಡದ ನ್ಯಾಯಬೆಲೆ ಅಂಗಡಿಕಾರರಿಗೆ ಎಚ್ಚರಿಕೆ ನೀಡಬೇಕು ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅರವಿಂದ ಏಗನಗೌಡರ ಹೇಳಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಗ್ಯಾರಂಟಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಹಾರ ಇಲಾಖೆ ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಬೇಕು. ಪಡಿತರ ಅಂಗಡಿಗಳಿಗೆ ಅನಿರೀಕ್ಷಿತ ಭೇಟಿ ನೀಡಬೇಕು. ಪಡಿತರ ಚೀಟಿದಾರರೊಂದಿಗೆ ಚರ್ಚಿಸಿ ದೂರುಗಳು ಕೇಳಿಬಂದರೆ ಕ್ರಮ ಜರುಗಿಸಬೇಕು ಎಂದರು.

ಮಳೆಗಾಲದಲ್ಲಿ ವಿದ್ಯುತ್ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಅವಘಡಗಳಾಗದಂತೆ ಹೆಸ್ಕಾಂ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಬೇಕು. ಸಾರ್ವಜನಿಕರು, ರೈತರು ಮಳೆಗಾಲದ ಸಮಯದಲ್ಲಿ ಟಿಸಿಗಳು ಹಾಗೂ ಮೋಟಾರ್ ಬಾಕ್ಸ್ಗಳನ್ನು ಮುಟ್ಟದಂತೆ ತಿಳಿವಳಿಕೆ ನೀಡಬೇಕು. ಲೈನ್‌ಮನ್‌ಗಳಿಗೆ ಹ್ಯಾಂಡ್‌ಗ್ಲೌಸ್ ಹಾಗೂ ಶೂ ಧರಿಸಿ ಕೆಲಸಮಾಡುವಂತೆ ಆದೇಶಿಸಬೇಕು ಎಂದರು.

ನ0ತರ ಇಲಾಖಾವಾರು ಅಧಿಕಾರಿಗಳಿಂದ ಗ್ಯಾರಂಟಿ ಯೋಜನೆಯ ಅನುಪಾಲನಾ ವರದಿಯ ಮಾಹಿತಿ ಪಡೆದು ಸಲಹೆ ನೀಡಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ, ಗ್ಯಾರಂಟಿ ಯೋಜನೆಯ ಸಮಿತಿ ಸದಸ್ಯರಾದ ರೇಣುಕಾ ಕಳ್ಳಿಮನಿ, ಕಾರ್ತಿಕ ಗೋಕಾಕ, ಪರಮೇಶ್ವರ ಕರಿಕಟ್ಟಿ, ಮಂಜು ಉಡಕೇರಿ, ಮಿಲಿಂದ ಇಚಂಗಿ, ರಾಜೇಶ ಚವ್ಹಾನ, ಸಿದ್ದಪ್ಪ ಅಗಸಿಮನಿ ಹಾಗೂ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಅಽಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net