ಪಂಚ ಗ್ಯಾರಂಟಿಗಳಿಂದ ಜನರಿಗೆ ಅನುಕೂಲ

nyamathi, Guarantee, Card,
Published on


ನ್ಯಾಮತಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ಪ್ರತಿ ಕುಟುಂಬಕ್ಕೂ ಅನುಕೂಲವಾಗಿದೆ ಎಂದು ಪಕ್ಷದ ಟೌನ್ ಘಟಕದ ಅಧ್ಯಕ್ಷ ಗುಂಡೂರು ಲೋಕೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ವೀರಭದ್ರೇಶ್ವರ ದೇಗುಲದಲ್ಲಿ ಶುಕ್ರವಾರ ವೀರಭದ್ರೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಪಂಚ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸಿ ಮಾತನಾಡಿದರು.

ವಿಧಾನ ಸಭಾ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಯೋಜನೆ ಜಾರಿಗೆ ತಂದಿದ್ದು, ದೇಶಾದ್ಯಂತ ಗ್ಯಾರಂಟಿಗಳನ್ನು ಜಾರಿಗೆ ತರಲು ಬಹುಮತ ನೀಡಬೇಕು. ಕಾಂಗ್ರೆಸ್ ಬಡವರ ಪರವಾಗಿದ್ದು, ಜನಸಾಮಾನ್ಯರ ಹಿತ ರಕ್ಷಣೆಗೆ ಬದ್ಧವಾಗಿದೆ ಎಂದರು.

ನ್ಯಾಮತಿ ಗ್ರಾಪಂ ಮಾಜಿ ಅಧ್ಯಕ್ಷೆ ಸುನೀತ್ ಹನುಮಂತರಾವ್, ಮಾಜಿ ಸದಸ್ಯರಾದ ಬಿ.ವಿ. ಚಂದ್ರಪ್ಪ, ನಾಗರಾಜಪ್ಪ ರೆಡ್ಡಿ, ವೀರಭದ್ರಪ್ಪ, ಗುಡ್ಡಪ್ಪ, ಶಾಂತಮ್ಮ ಕುಂಬಾರ್, ಕಾಂಗ್ರೆಸ್ ಮುಖಂಡರಾದ ಕೋಡಿಕೊಪ್ಪ ಶಿವಣ್ಣ, ಹೊಸಮನೆ ಮಲ್ಲಿಕಾರ್ಜುನ ಕುಂಬಾರ್, ರೆಡ್ಡಿ ಉಮೇಶ್, ರೆಡ್ಡಿ ಸುರೇಶ್, ಸಂತೋಷ್, ಸಂಜು, ಷಣ್ಮುಖಪ್ಪ ವಾಲ್ಮಿಕಿ, ಸಿ.ಕೆ. ಸುರೇಶ್, ಹುರಕಡ್ಲೆ ಅಶೋಕ ಬಸವರಾಜಪ್ಪ, ಕರಿಬಸಪ್ಪ, ಗೀತಾ ನಾಗರಾಜಪ್ಪ, ಎನ್.ಆರ್. ರುದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net