

ಕುಮಟಾ: ಜಿಎಸ್‌ಟಿ ಪಾವತಿ ಮಾಡುತ್ತಿರುವವರನ್ನು ಐಟಿ ರಿಟರ್ನ್ ಮಾಡಿದವರು ಎಂದು ಪರಿಗಣಿಸಿ ಗ್ಯಾರಂಟಿ (Guarantee) ಪ್ರಯೋಜನ ಕಡಿತ ಮಾಡಲಾಗಿದ್ದು, ಶೀಘ್ರ ಅಂಥವರ ಪಟ್ಟಿಯೊಡಣೆ ಬೆಂಗಳೂರಿಗೆ ತೆರಳಿ ಸಮಸ್ಯೆ ಬಗೆಹರಿಸೋಣ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಸತೀಶ ನಾಯ್ಕ ಹೇಳಿದರು.
ಕುಮಟಾ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. ಜಿಲ್ಲೆಯ 152 ಜನ ಅಂಗವಿಕಲ ಮತ್ತು ವಿವಿಧ ಕಾಯಿಲೆಗಳ ಕಾರಣ ಅರ್ಹ ಫಲಾನುಭವಿಗಳು ಹಾಸಿಗೆಯಲ್ಲಿದ್ದು, ಅವರಲ್ಲಿ 60 ಜನ ಕುಮಟಾ ತಾಲೂಕಿನಲ್ಲಿಯೇ ಇದ್ದಾರೆ. ಅವರಿಗೆ ಸೌಲಭ್ಯ ಕೊಡಿಸಲು ಅಽಕಾರಿಗಳು ಪ್ರತ್ಯೇಕ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ವರ್ಷಕ್ಕೆ ಏಳೆಂಟು ಸಾವಿರ ಜನ ಪದವಿ ಮುಗಿಸಿ ಹೊರಬೀಳುತ್ತಾರೆ. ಆದರೆ, ಈ ವರೆಗೆ 4236 ಜನ ಮಾತ್ರ ಯುವ ನಿಽ ಯೋಜನೆಯಡಿ ಅರ್ಜಿ ಹಾಕಿದ್ದಾರೆ ಈ ಬಗ್ಗೆ ಕಾಲೇಜ್‌ಗಳಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಜನಾರ್ಧನ ಕುಪ್ಪಾ ದೇವಾಡಿಗ, ಕುಮಟಾ ತಾಲೂಕು ಅಧ್ಯಕ್ಷ ಅಶೋಕ ಕೃಷ್ಣ ಗೌಡ, ದಾಂಡೇಲಿ ತಾಲೂಕು ಅಧ್ಯಕ್ಷ ರಿಯಾಜ್ ಅಹಮದ್, ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ಕಾಲಮ್ಮನವರ್ ಉಪಸ್ಥಿತರಿದ್ದರು.
ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಅನೇಕ Guarantee ಯೋಜನೆಗಳನ್ನು ಹಮ್ಮಿಕೊಂಡಿರುತ್ತದೆ. ಕುಟುಂಬದ ನಿರ್ವಹಣೆಯಲ್ಲಿ ಕುಟುಂಬ ಯಜಮಾನಿಯ ಪಾತ್ರ ಪ್ರಮುಖವಾಗಿದ್ದು, ಯಜಮಾನಿಯು ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬ ನಿರ್ವಹಣೆ ಉತ್ತಮ ಗುಣಮಟ್ಟದಲ್ಲಿರುತ್ತದೆ. ಆದ್ದರಿಂದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000/- ಗಳನ್ನು ನೀಡುವ “ಗೃಹಲಕ್ಷ್ಮಿ ಯೋಜನೆ”ಯನ್ನು ಜಾರಿಗೆ ತರಲಾಗಿದೆ.
ರಾಜ್ಯದ ಕುಟುಂಬದಲ್ಲಿನ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000/- ಗಳನ್ನು (ಎರಡು ಸಾವಿರ ರೂಪಾಯಿಗಳು ಮಾತ್ರ) ನೀಡುವ “ಗೃಹ ಲಕ್ಷ್ಮಿ” ಯೋಜನೆಯನ್ನು 2023-24ನೇ ಸಾಲಿನಲ್ಲಿ ಈ ಕೆಳಕಂಡಂತೆ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ಸರ್ಕಾರದ ಆದೇಶ ಸಂಖ್ಯೆ: ಮಮ ಇ 70 ಮಮ ಅ 2023, ಬೆಂಗಳೂರು, ದಿನಾಂಕ: 6ನೇ ಜೂನ್ 2023 ರಂತೆ ಆದೇಶಿಸಿರುತ್ತದೆ.