ಜಿಟಿಟಿಸಿ ಕೌಶಲ ತರಬೇತಿಗಳು ಬಹಳ ಸಹಕಾರಿ

gttc koppal officers visit
Published on

ಕೊಪ್ಪಳ: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಕ್ಕೆ ಕೊಪ್ಪಳ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರಾದ ಭಾರತಿ ಬಿದರಿಮಠ ಇತ್ತೀಚೆಗೆ ಭೇಟಿ ನೀಡಿದರು.

ಕಾಲೇಜಿನ ಎಲ್ಲಾ ವಿಭಾಗಗಳು, ಪ್ರಯೋಗಾಲಯಗಳನ್ನು ವೀಕ್ಷಿಸಿದ ಅವರು, ಜಿಟಿಟಿಸಿ ಆಡಳಿತ ವ್ಯವಸ್ಥೆ ಮತ್ತು ಕೌಶಲ್ಯ ತರಬೇತಿಯ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು. ಇದೇ ವೇಳೆ ಮಾತನಾಡಿದ ಅವರು, ಜಿಟಿಟಿಸಿ ಕೋರ್ಸ್ಗಳು ವೃತ್ತಿಪರ ಶಿಕ್ಷಣವಾಗಿರುವುದರಿಂದ ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಿದೆ. ಸುಧಾರಿತ ತಂತ್ರಜ್ಞಾನವನ್ನು ಹೊಂದಿರುವ ಈ ತರಬೇತಿ ಮಾರುಕಟ್ಟೆಗಳ ಅಗತ್ಯಗಳಿಗನುಗುಣವಾಗಿ ವಿನ್ಯಾಸಗೊಳಿಸಲಾಗಿದ್ದು, ಈ ಕೌಶಲ ತರಬೇತಿಗಳು ಕೈಗಾರಿಕ ಪ್ರಾಯೋಜಿತ ಅಭ್ಯರ್ಥಿಗಳಿಗೆ, ಮುಂದಿನ ಪೀಳಿಗೆಗೆ & ನಮ್ಮ ಇಲಾಖೆಗೆ ಬಹಳ ಸಹಕಾರಿ ಆಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೊಪ್ಪಳ ಜಿಟಿಟಿಸಿ ಸಂಸ್ಥೆಯ ಮುಖ್ಯಸ್ಥರಾದ ಮೌನೇಶ್​ ರಾಥೋಡ್​, ಪ್ರಾಶುಂಪಾಲರಾದ ಪ್ರಭುರಾಜ ಜಿ., ಉಪನ್ಯಾಸಕರಾದ ಅಂಜೀನಪ್ಪ, ಮುತ್ತಣ್ಣ, ಶ್ರೀನಿವಾಸ ಪೂಜಾರಿ, ಸೈಯದ್​ ಆಜಂ ಸೇರಿದಂತೆ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net