ಜಿಟಿ, ಜಿಟಿ ಮಳೆಗೆ ಜನ ಜೀವನ ಅಸ್ತವ್ಯಸ್ತ.

hdl 1
ಹೂವಿನಹಡಗಲಿ ಪಟ್ಟಣದಲ್ಲಿ ಶನಿವಾರ ಸುರಿದ ಮಳೆಯಿಂದ ಬೀದಿಬದಿಯ ವ್ಯಾಪಾರಿಗಳು ಮಾರಾಟದ ವಸ್ತುಗಳ ಮೇಲೆ ತಾಡಪಾಲ ಹಾಕುವ ಮೂಲಕ ಮಳೆಯಿಂದ ರಕ್ಷಸಿಕೊಂಡರು.
Published on

ಹೂವಿನಹಡಗಲಿ: ಪಟ್ಟಣ ಸೇರಿ ತಾಲೂಕಿನ ಇತರ ಭಾಗಗಳಲ್ಲಿ ಮುಂಜಾನೆಯಿಂದಲೆ ಮೋಡಕವಿದ ವಾತಾವರಣವಿದ್ದು ಅಲ್ಲಲ್ಲಿ ಮಳೆಯಾಗುವ ಮೂಲಕ ಶನಿವಾರ ಜನರ ಜೀವನ ಅಸ್ತವ್ಯಸ್ತಗೊಂಡಿದೆ.

ಮುಂಜಾನೆ ಅಲ್ಪ ಸಮಯ ಸೂರ್ಯ ಕಾಣಿಸಿಕೊಂಡನಾದರೂ ನಂತರ ತಾಲೂಕಿನಲ್ಲಿ ಮೋಡಕವಿದ ವಾತಾವರಣವಾಗಿ ತಂಪುಗಾಳಿ ಬೀಸಲು ಪ್ರಾರಂಭವಾಗಿತ್ತು.

ಮಧ್ಯಾಹ್ನ ಮಳೆ ಸುರಿಯಲು ಆರಂಭವಾಯಿತು. ಜಿಟಿ, ಜಿಟಿ ಮಳೆಗೆ ಬೀದಿ ಬದಿ ವ್ಯಾಪಾರಿಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಮಳೆಯಲ್ಲಿ ನೆನೆದುಕೊಳ್ಳುವಂತಾಯಿತು.

ಬೀದಿ ಬದಿ ವ್ಯಾಪಾರಿಗಳು ತಾವು ಮಾರಾಟ ಮಾಡಲು ತಂದಿದ್ದ ವಸ್ತುಗಳ ಮೇಲೆ ತಾಡಪಾಲು ಹಾಕಿ ಮಳೆಯಿಂದ ರಕ್ಷಸಿದರು. ಇನ್ನು ಶನಿವಾರದ ಸಂತೆಗಾಗಿ ಪಟ್ಟಣಕ್ಕೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಗ್ರಾಮಸ್ಥರು ಮಳೆಯಿಂದ ರಕ್ಷಸಿಕೊಳ್ಳಲು ಪರದಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net