ಜಿಎಸ್ ಟಿ ರಿಯಾಯಿತಿ, ಸಂಸದರ ನೇತೃತ್ವದಲ್ಲಿ ವಹಿವಾಟು ಲಾಭ ಲೆಕ್ಕಾಚಾರದ ಜಾಗೃತಿ

IMG_20250925_232348.jpg
Published on

ಚಿಕ್ಕಬಳ್ಳಾಪುರ: ಸವಲತ್ತುಗಳನ್ನು ಸರ್ಮಪಕವಾಗಿ ಅರ್ಹರಿಗೆ ದೊರಕಿಸಿಕೊಟ್ಟಾಗ ಮಾತ್ರ ಸರ್ಕಾರದ ಯೋಜನೆಗಳ ಜಾರಿಗೆಗೆ ಸಾರ್ಥಕತೆ ಬರುತ್ತದೆ ಎಂದು ಸಂಸದ ಡಾ ಕೆ.ಸುಧಾಕರ್‌ ತಿಳಿಸಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಜಿಎಸ್‌ಟಿ ಸುಧಾರಣೆ ಕ್ರಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಸೆ.೨೨ ರಿಂದ ಜಿಎಸ್‌ಟಿ 2 ಸುಧಾರಣೆಗಳನ್ನು ಜಾರಿಗೆ ತಂದಿದೆ. ಈ ಹಿಂದೆ ಶೇ.12 ರಷ್ಟು ತೆರಿಗೆಯಡಿ ಬಹುತೇಕ ಎಲ್ಲ ಸರಕುಗಳು ಶೇ.5 ಸ್ಲ್ಯಾಬ್ ನಡಿಯಲ್ಲಿ ಬರುತ್ತಿವೆ. ಇದರಿಂದಾಗಿ ಅನೇಕ ಗೃಹೋಪಯೋಗಿ ವಸ್ತುಗಳ ವೆಚ್ಚ ಕಡಿಮೆಯಾಗಿ ಕುಟುಂಬಗಳಿಗೆ ನೆರವಾಗಿದೆ ಎಂದು ಅವರು ವಿವರಿಸಿದರು.
ಜಿಎಸ್‌ಟಿನಡಿ ಬರುವ ಶೇ,99 ಸರಕು ಮತ್ತು ಸೇವೆಗಳು ಇದೀಗ ಶೂನ್ಯ, ಶೇ.5 ಇಲ್ಲವೇ ಶೇ.18 ರ ಸ್ಲ್ಯಾಬ್‌ಗಳಡಿ ಬರುತ್ತಿವೆ. ಕೇವಲ ಶೇ.1 ನಷ್ಟು ಸರಕುಗಳಿಗೆ ಮಾತ್ರ ಹೆಚ್ಚಿನ ತೆರಿಗೆ ವಿಧಿಸಲಾಗಿದೆ. ಆರೋಗ್ಯ ವಿಮೆ, ಜೀವ ವಿಮೆಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. ಇದು ಪ್ರತಿ ಕುಟುಂಬಗಳಿಗೆ ಭದ್ರತೆ ಪಡೆಯಬಹುದು ಎಂದರು.
ಜಿಎಸ್‌ ಟಿ  ಸುಧಾರಣೆಗಳು ಕೇವಲ ಕಾಗದದ ಮೇಲಿನ ಅಕ್ಷರಗಳಲ್ಲ. ಇವು ಪ್ರತಿ ಕುಟುಂಬಕ್ಕೂ ತೃಪ್ತಿ ಹಾಗೂ ಸಮಾಧಾನ ತಂದಿವೆ. ದಿನಸಿ, ಗೃಹೋಪಯೋಗಿ ವಸ್ತುಗಳು, ದಿನನಿತ್ಯದ ಬಳಕೆಯ ಸರಕುಗಳು ತೆರಿಗೆ ಇಳಿದಿರುವುದರಿಂದ ಕುಟುಂಬದ ಖರ್ಚು ಕಡಿಮೆಯಾಗಿದೆ ಎಂದರು.

* ವಿವಿಧೆಡೆ ಭೇಟಿ ಜಾಗೃತಿ

ಜಿಲ್ಲಾ ಕೇಂದ್ರದಲ್ಲಿನ ಎಲ್‌ ಐಸಿ ಕಚೇರಿ, ದಿನಸಿ ಅಂಗಡಿಗಳು, ದ್ವಿಚಕ್ರ ವಾಹನ, ಟ್ರ್ಯಾಕ್ಟರ್‌ ಮಾರಾಟ ಅಂಗಡಿ ಹಾಗೂ ಉದ್ಯಮ ಸಂಸ್ಥೆಗಳಿಗೆ ಭೇಟಿ ನೀಡಿದ ಸಂಸದ ಡಾ.ಕೆ.ಸುಧಾಕರ್, ವ್ಯಾಪಾರಿಗಳು, ಗ್ರಾಹಕರು, ಉದ್ದಿಮೆದಾರರು, ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಹೊಸ ಜಿಎಸ್‌ಟಿಯಿಂದಾಗಿ ಕುಟುಂಬದ ಖರ್ಚುಗಳಲ್ಲಿ ಇಳಿಕೆ, ಅಗತ್ಯ ವಸ್ತುಗಳ ಬೆಲೆ ಇಳಿಕೆ, ಆರೋಗ್ಯ ವಿಮೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅಭಿಪ್ರಾಯಗಳನ್ನು ಆಲಿಸಲಾಯಿತು. ಹಲವೆಡೆ ಜಿಎಸ್‌ಟಿ ಮಾಹಿತಿಯ ಸ್ಟಿಕ್ಕರ್‌ ಗಳನ್ನು ಅಂಟಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net