

ಉಡುಪಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚು ವಹಿವಾಟು ಮಾಡಿದ ವರ್ತಕರಿಗೆ ವಾಣಿಜ್ಯ ತೆರಿಗೆ ಇಲಾಖೆ ಶೋಕಾಸ್ ನೋಟಿಸ್ ನೀಡಿದ್ದರೂ ಮಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ವ್ಯಾಪಾರಿಗಳಿಗೆ ಕೇವಲ ಇಂಟಿಮೇಶನ್ ಪತ್ರ ರವಾನಿಸಿದ್ದೇವೆ. ಇದಕ್ಕೆ ಸ್ಪಷ್ಟನೆ ನೀಡಿದರೆ ಪ್ರಕರಣ ಮುಗಿದು ಹೋಗಲಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಹೊಳೆಯಪ್ಪ ಎಚ್. ತಿಳಿಸಿದರು.
ಜಿಲ್ಲಾ ವರ್ತಕರ ಹಿತರಕ್ಷಣ ವೇದಿಕೆ ಹಾಗೂ ಲೆಕ್ಕಪರಿಶೋಧಕರ ಸಂದ ವತಿಯಿಂದ ನಡೆದ ಜಿಎಸ್ಟಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಯಾವುದೇ ವ್ಯಾಪಾರ ತೆರಿಗೆ ವ್ಯಾಪ್ತಿಗೆ ಒಳಪಟ್ಟಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವುದು ಇಲಾಖೆಯ ಕಾರ್ಯವಾಗಿದ್ದು, ಸಮಸ್ಯೆ ಬಂದ ಬಳಿಕ ಪರಿಹಾರ ಹುಡುಕುವ ಬದಲು ಆರಂಭದಲ್ಲೇ ತಿಳುವಳಿಕೆ ಹೊಂದುವುದು ಉತ್ತಮ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಕೊಲಿನ್ ರೋಡ್ರಿಗಸ್ ಮಾತನಾಡಿ, ಕರೊನೋತ್ತರ ಕಾಲಟ್ಟದಲ್ಲಿ ಎಲ್ಲಾ ವ್ಯವಹಾರಗಳು ಆನ್ ಲೈನ್ ಮೂಲಕ ನಡೆಯಲು ಪ್ರಾರಂಭವಾಗಿದ್ದು, ಆದಾಯ ತೆರಿಗೆ ಇಲಾಖೆ ಪಾರದರ್ಶಕತೆಗೆ ಆದ್ಯತೆ ನೀಡುತ್ತಿದೆ. ಹೀಗಾಗಿ ವ್ಯಾಪಾರಿಗಳಿಗೆ ಕಾನೂನು ಅರಿವು ಅತೀ ಅಗತ್ಯವಾಗಿದೆ ಎಂದರು.
ನೋಟಿಸ್ ರದ್ದು ಸಾಧ್ಯವಿಲ್ಲ
ವಾಣಿಜ್ಯ ತೆರಿಗೆ ಅಥವಾ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದ ಬಳಿಕ ಅದನ್ನು ರದ್ದು ಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ತಪ್ಪಾಗಿ ನೋಟಿಸ್ ಕೊಟ್ಟರೂ ಹಿಂಪಡೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಅದ್ದರಿಂದ 20ಕ್ಕಿಂತ ಮೇಲ್ಪಟ್ಟು ವ್ಯಾಪಾರ ಮಾಡುತ್ತಿರುವವರು ಜಿಎಸ್ಟಿ ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಹೂ, ಹಣ್ಣು, ಪ್ಯಾಕೆಟ್ ರಹಿತ ಹಾಲು ಸೇರಿದಂತೆ ಅನೇಕ ವಸ್ತುಗಳು ತೆರಿಗೆ ಮುಕ್ತ ವಲಯದಲ್ಲಿದ್ದು, ಈ ಬಗ್ಗೆ ವ್ಯಾಪಾರಿಗಳು ಸಂಬಂಧಪಟ್ಟ ಇಲಾಖೆ ಅಥವಾ ಲೆಕ್ಕಪರಿಶೋಧಕರ ಬಳಿ ಮಾಹಿತಿ ಪಡೆದುಕೊಳ್ಳಬಹುದು ಎಂದರು.
ಜಿಲ್ಲಾ ವರ್ತಕರ ಹಿತರಕ್ಷಣ ವೇದಿಕೆ ಅಧ್ಯಕ್ಷ ಆನಂದ ಕಾರ್ನಾಡ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಕಾರ್ಯದರ್ಶಿ ಓಸ್ವಾಲ್ಡ್ ಸಲ್ದಾನಾ, ಲೆಕ್ಕಪರಿಶೋಧಕರ ಸಂದ ಅಧ್ಯೆ ಅರ್ಚನಾ ಮಯ್ಯ, ಸಿಎ ಅಶ್ವಥ್ ಜೆ. ಶೆಟ್ಟಿ, ಸಿಎ ರಾವೇಂದ್ರ ಮೊಗವೀರ ಉಪಸ್ಥಿತರಿದ್ದರು. ಎಂ. ಗಣೇಶ ಕಿಣಿ ಸ್ವಾಗತಿಸಿ, ಸಿಎ ಲಕ್ಷಿ$್ಮಶ ರಾವ್ ಕಾರ್ಯಕ್ರಮ ನಿರೂಪಿಸಿದರು.