ಜಿಎಸ್‌ಟಿ ಕಡಿತ ಕ್ರಾಂತಿಕಾರಕ ಹೆಜ್ಜೆ

22 lxr 3( mla)
Published on

ಲಕ್ಷ್ಮೇಶ್ವರ: ದೇಶದ ಜನತೆಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನಾಗರಿಕ ದೇವೋಭವ ಎಂಬ ಘೋಷಣೆಯೊಂದಿಗೆ ಜಿಎಸ್‌ಟಿ ದರ ಕಡಿತ ಮಾಡಿರುವುದು ಕ್ರಾಂತಿಕಾರಕ ಹೆಜ್ಜೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 375 ವಸ್ತುಗಳ ತೆರಿಗೆ ಕಡಿಮೆ ಮಾಡಲಾಗಿದೆ. ಈ ಮೊದಲಿದ್ದ ನಾಲ್ಕು ಸ್ಲ್ಯಾಬ್‌ಗಳ ಬದಲಾಗಿ ಎರಡು ಸ್ಲ್ಯಾಬ್ಗೆ ಜಿಎಸ್‌ಟಿ ನಿಗದಿಪಡಿಸಿದ್ದು ಸ್ವಾಗತಾರ್ಹ. ಇದರಿಂದಾಗಿ ದಿನೋಪಯೋಗಿ ವಸ್ತುಗಳ ಬೆಲೆ ಕಡಿಮೆ ಆಗಲಿದ್ದು ಜನರ ಮೇಲಿನ ಹೊರೆ ಕಡಿತಗೊಳ್ಳಲಿದೆ. ಜಿಎಸ್ಟಿ ಕಡಿಮೆ ಮಾಡಿರುವದಕ್ಕೆ ಆರೋಪಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ಆಡಳಿತ ನಡೆಸಲು ಹೆಣಗಾಡುತ್ತಿದ್ದಾರೆ ಎಂದರು.

ಬಿಜೆಪಿ ಶಿರಹಟ್ಟಿ ಮಂಡಳದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಮಾತನಾಡಿ, ಜಿಎಸ್‌ಟಿ ಕಡಿತ ಆಗಿರುವುದರಿಂದ ರಾಜ್ಯ ಸರ್ಕಾರಕ್ಕೆ ಎರಡು ಲಕ್ಷ ಕೋಟಿ ರೂಪಾಯಿಗಳ ಆದಾಯ ಕೊರತೆ ಆಗಲಿದೆ ಎಂದು ಸಿದ್ಧರಾಮಯ್ಯನವರು ಹೇಳುತ್ತಿದ್ದಾರೆ. ಅಂದರೆ ಜಿಎಸ್‌ಟಿ ಕಡಿತ ಮಾಡಬಾರದಿತ್ತು ಎಂಬುದು ಅವರ ಅಭಿಪ್ರಾಯ. ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕ ತೆರಿಗೆ ಸಂಗ್ರಹಿಸುವ ಮೂಲಕ ಜನರನ್ನು ಲೂಟಿ ಮಾಡುತ್ತಿದೆ. ಆರೋಪಿಸಿದರು.

ಚಂಬಣ್ಣ ಬಾಳಿಕಾಯಿ, ನಿಂಗಪ್ಪ ಬನ್ನಿ, ವಿಜಯ ಮೆಕ್ಕಿ, ಪೂರ್ಣಾಜಿ ಖರಾಟೆ, ಎಂ.ಆರ್. ಪಾಟೀಲ, ನೀಲಪ್ಪ ಹತ್ತಿ, ಅನಿಲ ಮುಳುಗುಂದ, ಅಶ್ವಿನಿ ಅಂಕಲಕೋಟಿ, ಗಂಗಾಧರ ಮೆಣಸಿನಕಾಯಿ, ಮಂಜುಳಾ ಗುಂಜಳ, ಮಹಾದೇವಪ್ಪ ಅಣ್ಣಿಗೇರಿ, ಸೋಮೇಶ್ ಉಪನಾಳ, ದುಂಡೇಶ ಕೊಟಗಿ, ಭೀಮಣ್ಣ ಯಂಗಾಡಿ, ಪ್ರವೀಣ ಬೋಮಲೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net