ಜಿಎಸ್‌ಟಿ ವಂಚಿಸುತ್ತಿದ್ದವನ ಬಂಧನ

Crime Logo
Published on

ಮೈಸೂರು: ನಕಲಿ ಇನ್‌ವಾಯ್ಸಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ಕೋಟ್ಯಂತರ ರೂ. ಜಿಎಸ್‌ಟಿ ವಂಚನೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಮೈಸೂರಿನ ರಬ್ ಟ್ರೇಡರ್ಸ್‌ ಮಾಲೀಕ ಬಂಧಿತ ಆರೋಪಿಯಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೊರ ರಾಜ್ಯಗಳಿಂದ ಮೈಸೂರಿಗೆ ತರಿಸುವ ಸರಕು ಹಾಗೂ ನಗರದಿಂದ ಹೊರರಾಜ್ಯಗಳಿಗೆ ಕಳುಹಿಸುವ ಸರಕುಗಳ ಸಂಬಂಧ ನಕಲಿ ಇನ್‌ವಾಯ್ಸಗಳನ್ನು ಸೃಷ್ಟಿಸಿ ಸರ್ಕಾರಕ್ಕೆ 14 ಕೋಟಿ ರೂ.ಗೂ ಹೆಚ್ಚು ತೆರಿಗೆ ವಂಚಿಸಲಾಗಿದೆ ಎನ್ನಲಾಗಿದೆ.
ಯಾವುದೇ ಅಧಿಕೃತ ರಸೀದಿ ಇಲ್ಲದೆ, ನಕಲಿ ಘಟಕಗಳಿಗೆ ಸರಕು ಸಾಗಣೆ ಮಾಡಿರುವಂತೆ ತೋರಿಸಿ ಕೋಟ್ಯಂತರ ರೂ. ವಹಿವಾಟು ಕೇವಲ ಕಾಗದದ ಮೇಲೆ ನಡೆದಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗಿದೆ. ಈ ಬಗ್ಗೆ ಬಂದ ವರದಿ ಆಧರಿಸಿದ ಮೈಸೂರಿನ ಕೇಂದ್ರೀಯ ತೆರಿಗೆ ಜಿಎಸ್‌ಟಿ ಕಚೇರಿಯ ಅಧಿಕಾರಿಗಳು, ಪ್ರಕರಣ ದಾಖಲಿಸಿಕೊಂಡು ವಂಚನೆಯ ಜಾಲ ಭೇದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net